ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ವಿದ್ಯಾರ್ಥಿಗೆ; ನಡು ರಸ್ತೆಯಲ್ಲಿಯೇ ಧರ್ಮದೇಟು...!

ಕಾಲೇಜು ಯುವತಿಯನ್ನು ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಯುವತಿಯ ಮನೆಯವರು ನಡು ರಸ್ತೆಯಲ್ಲಿಯೇ ಧರ್ಮದೇಟು ಕೊಡಲು ಮುಂದಾದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಅಳ್ನಾವರ ಪಟ್ಟಣದ ಇಂದಿರಾ ಬಡಾವಣೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು,ಹಲವು ದಿನಗಳಿಂದ ಯುವಕನೊಬ್ಬ ತನ್ನದೇ ಕಾಲೇಜಿನ ವಿದ್ಯಾರ್ಥಿನಿಗೆ ಚುಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ನಡು ರಸ್ತೆಯಲ್ಲಿಯೇ ವಿದ್ಯಾರ್ಥಿಗೆ ಧರ್ಮದೇಟು ಕೊಡಲು ಮುಂದಾಗಿದ್ದಾರೆ.

ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಕಾಲೇಜು ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದಾಗ ವಿದ್ಯಾರ್ಥಿ ಯುವತಿಯ ಪೋಷಕರ ಮುಂದೆ ನನ್ನದು ತಪ್ಪಾಗಿದೆ ಮತ್ತೇ ಈ ರೀತಿ ತಪ್ಪು ಮಾಡಲ್ಲ ಎಂದು ಕೇಳಿಕೊಂಡಿದ್ದಾನೆ. ಇದೇ ವೇಳೆ ಸಾರ್ವಜನಿಕರು ಮತ್ತೇ ಈ ರೀತಿಯಾದ ತಪ್ಪನ್ನು ಮಾಡಬೇಡ ಎಂದು ವಿದ್ಯಾರ್ಥಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2022 12:21 pm

Cinque Terre

101.65 K

Cinque Terre

2

ಸಂಬಂಧಿತ ಸುದ್ದಿ