ಎಸ್ ಇಲ್ಲಿ ಹೀಗೆ ಸಣ್ಣದೊಂದು ಚಾಕು ತೋರಿಸುತ್ತಾ ನಿಂತಿರುವ ಕಿರಾತಕರೇ ನಿನ್ನೆ ಸಂಜೆ ವೇಳೆ ಕ್ಷುಲ್ಲಕ ಕಾರಣಕ್ಕೆ ತಮ್ಮದೇ ಏರಿಯಾದ ಇಬ್ಬರು ಅಣ್ಣ ತಮ್ಮಂದಿರಿಗೆ ಚಾಕು ಇರಿದು ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲು ಹೊರಟಿದ್ದರು. ಆದ್ರೆ ಕಸಬಾ ಪೇಟೆ ಪೊಲೀಸರು ಎಲ್ಲದಕ್ಕೂ ಈಗ ಬ್ರೇಕ್ ಹಾಕಿ ಜೈಲು ಕಂಬಿ ಎಣಿಸುವ ಕೆಲಸಕ್ಕೆ ತಳ್ಳಿದ್ದಾರೆ.
ಹೌದು. ಇಲ್ಲಿ ನಿಂತು ತಮಗೆ ಹೇಗೆ ಹೊಡೆದರು ಅಂತ ಹೇಳ್ತಿದ್ದಾರೆ ನೋಡಿ, ಇವನೇ ಮದರ್ಷ, ನಿನ್ನೆ ದಿನ ಈತನನ್ನು ಹಾಗೂ ಈತನ ಅಣ್ಣ ಮುನಾವರ್ ನನ್ನು ಅದೇ ಏರಿಯಾದ ಮೂರ್ನಾಲ್ಕು ಜನ ಕಳೆದ ದಿನ ಬೈಕ್ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಚಾಕುವಿನಿಂದ ಹೊಡೆದಾಡುವ ಹಂತಕ್ಕೆ ಹೋಗಿದೆ.
ಪೊಲೀಸರೊಂದಿಗೆ ಕೈಗೆ ಕೊಳ ಹಾಕಿಕೊಂಡು ತಮ್ಮದೆ ಏರಿಯಾದಲ್ಲಿ ತಲೆ ತಗ್ಗಿಸಿ ನಿಂತಿರುವ ಈ ಆರೋಪಿಗಳೆ ಚಾಕು ಇರಿದವರು, ಈ ಪುಡಿ ರೌಡಿಗಳ ಹೆಸರು ಸಾದಿಕ್ ಅನ್ವರ್, ಅಲ್ತಾಫ್ ಅಂತ.
ಚಾಕು ಇರಿಯುವ ಮಾಹಿತಿ ತಿಳಿಯುತ್ತಿದ್ದಂತೆ ನಿನ್ನೆ ಸಂಜೆ ಕಸಬಾ ಪೇಟೆ ಪೊಲೀಸ್ ಇನ್ಸಪೆಕ್ಟರ್ A M ಬನ್ನಿ ,ಸಿಬ್ಬಂದಿಗಳಾದ I K ಧಾರವಾಡ, ರಾಜಕುಮಾರ್ ಹಾಗೂ ತಳವಾರ ಸೇರಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಆರೋಪಿಗಳನ್ನ ಹೆಡೆಮುರಿ ಕಟ್ಟಿ ತಂದಿದ್ದಾರೆ
ಇನ್ನು ಈಗಾಗಲೇ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು ತನಿಖಾ ಅಧಿಕಾರಿಗಳು, ಆರೋಪಿಗಳಾದ ಸಾದಿಕ್ ಅನ್ವರ್, ಹಾಗೂ ಅಲ್ತಾಫ್ ನಿಗೆ ಪೊಲೀಸ್ ಭಾಷೆಯಲ್ಲಿ ಲೆಫ್ಟ್ ರೈಟ್ ಹೇಳುತ್ತಿದ್ದು ಇನ್ನಾದರೂ ಈ ಕಡೆ ಶಾಂತಿ ನೆಲೆಸುತ್ತ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/06/2022 05:18 pm