ಹುಬ್ಬಳ್ಳಿ: ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆಸಿದ್ದ ಆರೋಪಿಯೊಬ್ಬ ಪೊಲೀಸ್ ಠಾಣೆಯಲ್ಲಿಯೇ ತಲೆ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಹುಬ್ಬಳ್ಳಿಯ ಮಂಟೂರ ರೋಡ್ ನಿವಾಸಿಯಾದ ಡೇವಿಡ್ ಯಾಮಾರ್ತಿ ಎಂಬಾತ ನಿನ್ನೆ ಕೆಲವು ಯುವಕರ ಜೊತೆ ತೆಗೆದು ಗಲಾಟೆ ಮಾಡಿದ್ದ. ಹೀಗಾಗಿ ಬೆಂಡಿಗೇರಿ ಠಾಣೆಯ ಪೊಲೀಸರು ಈತನನ್ನು ಇಂದು ಮಧ್ಯಾಹ್ನ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಡೇವಿಡ್ ಏಕಾಏಕಿ ಠಾಣೆಯಲ್ಲಿನ ಕಬ್ಬಿಣದ ಸರಳಿಗೆ ತಲೆ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಪೊಲೀಸರು ಆತನನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾದರು ಕೂಡಾ ಕುಡಿದ ಮತ್ತಿನಲ್ಲಿದ್ದ ಡೇವಿಡ್ ವೈದ್ಯರಿಗೆ ಸರಿಯಾಗಿ ಸ್ಪಂದಿಸದೇ ಅವಾಚ್ಯವಾಗಿ ನಿಂದಿಸಿದ್ದಾನೆ. ಇದರಿಂದಾಗಿ ವೈದ್ಯರಿಗೂ ಕೂಡಾ ಚಿಕಿತ್ಸೆ ಕೊಡೋದು ಹೇಗೆ ಎಂಬ ತಲೆ ನೋವು ಶುರುವಾಗಿದೆ.
ಇನ್ನು ಡೇವಿಡ್ ರೇಲ್ವೆ ಪೊಲೀಸ್ ಠಾಣೆ ಸೇರಿದಂತೆ ಇನ್ನು ಕೆಲವು ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರೀತಿಯಾದ ನಾಟಕವನ್ನ ಡೇವಿಡ್ ಮಾಡಿದ್ದಾನೆ. ಸದ್ಯ ಕಿಮ್ಸ್‌ನಲ್ಲಿ ಡೇವಿಡ್‌ಗೆ ಚಿಕಿತ್ಸೆ ಕೊಡಿಸಲು ಕೂಡಾ ಪೊಲೀಸರು ಹರಸಾಹಸವನ್ನು ಮಾಡುತ್ತಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
10/10/2022 05:19 pm