ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಹಳೆ ದ್ವೇಷ ಹಿನ್ನೆಲೆ" ಮನೆಗೆ ನುಗ್ಗಿ ಅಣ್ಣ-ತಂಗಿಗೆ ಚಾಕು ಇರಿತ; ಆರೋಪಿ ಸೆರೆ

ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬ ಅಣ್ಣ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಗಾಯಗೊಂಡಿರುವ ಅಣ್ಣ- ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಇವರು ಉಣಕಲ್ ನ ಬಾದಾಮಿ ಓಣಿಯ ನಿವಾಸಿಗಳಾದ ದ್ಯಾಮಣ್ಣ ಹಾಗೂ ತಾಯವ್ವ. ಸಂಬಂಧದಲ್ಲಿ ಅಣ್ಣ- ತಂಗಿ. ಅದೇ ಓಣಿಯಲ್ಲಿದ್ದ ಹನುಮಂತ ಎಂಬಾತನ ಜೊತೆ ದ್ಯಾಮಣ್ಣನಿಗೆ ವೈಯಕ್ತಿಕ ದ್ವೇಷ ಇತ್ತು. ಹೀಗಾಗಿ ನಿನ್ನೆ ಇಬ್ಬರ ನಡುವೆ ವಾಗ್ವಾದ ಕೂಡ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಹನುಮಂತ ಇಂದು ಬೆಳಗ್ಗೆ ಉಣಕಲ್ ನಲ್ಲಿರುವ ದ್ಯಾಮಣ್ಣನ ಮನೆಗೆ ಏಕಾಏಕಿ ನುಗ್ಗಿ ಚಾಕುವಿನಿಂದ ದ್ಯಾಮಣ್ಣ ಹಾಗೂ ಆತನ ತಂಗಿ ತಾಯವ್ವನಿಗೆ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡ ಇಬ್ಬರನ್ನೂ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಮ್ಸ್ ಗೆ ಎಸಿಪಿ ವಿನೋದ ಮುಕ್ತೇದಾರ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದರು. ಆರೋಪಿ ಹನುಮಂತನನ್ನು ವಿದ್ಯಾನಗರ ಠಾಣೆ ಇನ್ಸ್‌ ಪೆಕ್ಟರ್ ಸಂತೋಷ ಪವಾರ್‌ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

- ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/10/2022 08:05 pm

Cinque Terre

190.38 K

Cinque Terre

4

ಸಂಬಂಧಿತ ಸುದ್ದಿ