ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಕ್ರಮ ಚಿನ್ನ ಸಾಗಾಟ ಮಾಡ್ತಿದ್ದ ಇಬ್ಬರು ಖದೀಮರು ಅರೆಸ್ಟ್‌

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಎದುರಿಗೆ, ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದನ್ನು ಖಚಿತ ಮಾಹಿತಿ ಮೇರೆಗೆ ಉಪನಗರ ಪೊಲೀಸರು ಇಬ್ಬರನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು,,,ಗುಜರಾತ ಮೂಲದ ಮನೀಶ ಹಿಮ್ಮತಲಾಲಾ ಸೋನಿ, ದರ್ಶನ್ ಸೋನಿ ಈ ಇಬ್ಬರು ಯಾವುದೇ ರೀತಿಯ ಬಿಲ್ ಇಲ್ಲದೆ ಸುಮಾರು 818.030 ಮೀಲಿ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗೂ ಗಟ್ಟಿ ಬಂಗಾರನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಉಪನಗರ ಪೊಲೀಸರು ಈ ಇಬ್ಬರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಆಯುಕ್ತ ಲಾಬೂರಾಮ್, ಡಿಸಿಪಿ ಸಾಹಿಲ್ ಬಾಗ್ಲಾ ಡಾ. ಗೋಪಾಲ ಎಮ್ ಬ್ಯಾಕೋಡ, ಎಸಿಪಿ ವಿನೋದ ಮುಕ್ತದಾರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವಿಚಂದ್ರ ಡಿ .ಬಿ. ಹಾಗೂ ಅಪರಾಧ ವಿಭಾಗದ ಪಿಎಸ್‌ಐ (ಅವಿ) ಕವಿತಾ ಎಸ್ ಎಮ್ ಮತ್ತವರ ಸಿಬ್ಬಂದಿಗಳ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಆರೋಪಿ ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವಿಚಂದ್ರ ಡಿ ಬಿ , ಪಿಎಸ್‌ಐ ( ಅವಿ ) ಕವಿತಾ ಎಸ್ ಎಮ್ , ಪ್ರೋ ಪಿ.ಎಸ್.ಐ ಸ್ವಾತಿ ಮುರಾರಿ , ಎಎಸ್‌ಐ ಎಮ್ ಆರ್ ಮಲ್ಲಿಗವಾಡ ಮತ್ತು ಸಿಬ್ಬಂದಿ ಜನರಾದ ಮಲ್ಲಿಕಾರ್ಜುನ

ಧನಿಗೊಂಡ , ಮಂಜುನಾಥ ಯಕ್ಕಡಿ , ಶ್ರೀನಿವಾಸ ಯರಗುಪ್ಪಿ , ಕೃಷ್ಣಾ ಮೋಟೆಬೆನ್ನೂರು , ಮಂಜುನಾಥ ಹಾಲವರ , ಪ್ರರೇಣ ಕಲಗುಡಿ , ರೇಣಪ್ಪ ಸಿಕ್ಕಲಗೇರ , ಮಾಬುಸಾಬ ಮುಲ್ಲಾ ಹಾಗೂ ಆರೂಢ ಕರೆಣ್ಣವರ ಇವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ - ಧಾರವಾಡ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ .

Edited By : Abhishek Kamoji
Kshetra Samachara

Kshetra Samachara

29/09/2022 07:40 pm

Cinque Terre

39.54 K

Cinque Terre

5

ಸಂಬಂಧಿತ ಸುದ್ದಿ