ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜೈಲುವಾಸ ಅನುಭವಿಸಿದ್ರೂ ಬುದ್ಧಿ ಬರಲಿಲ್ಲ; ಮತ್ತೆ ತನ್ನ ಪತ್ನಿಯನ್ನೆ ಕೊಂದು ಪರಾರಿಯಾದ ಗದಿಗೆಪ್ಪ

ಧಾರವಾಡ: ಕೆಲವೊಂದಿಷ್ಟು ಜನ ತಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡಿದ ತಪ್ಪಿಗೆ ಜೈಲು ಸೇರುತ್ತಾರೆ,ಅಲ್ಲೇ ನಾಲ್ಕು ಗೋಡೆಗಳ ಮಧ್ಯ ಶಿಕ್ಷೆಯನ್ನು ಕೂಡಾ ಅನುಭವಿಸಿ ತಾವು ಮಾಡಿದ ತಪ್ಪಿನ ಅರಿವಾಗಿ ಮನ ಪರಿವರ್ತನೆ ಮಾಡಿಕೊಂಡು,ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೇ ಆ ತಪ್ಪು ಆಗದಂತೆ ಹೊಸ ಜೀವನ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಮಾತ್ರ ಜೈಲುವಾಸ ಅನುಭವಿಸಿ ಮತ್ತೇ ತಪ್ಪು ಮಾಡಿ ಇದೀಗ ಪರಾರಿಯಾಗಿದ್ದಾನೆ...

ಅಷ್ಟಕ್ಕೂ ಈ ನಟೋರಿಯಸ್ ಆಸಾಮಿಯ ಕಥೆ ಏನು ಅಂತೀರಾ...ಈ ಸ್ಟೋರಿ ನೋಡಿ....ಈ ಫೋಟೋದಲ್ಲಿ ಕಾಣುತ್ತಿರೋ ಈ ವ್ಯಕ್ತಿಯ ಹೆಸರು ಗದಿಗೆಪ್ಪ ಮೂಲತಃ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದ ನಿವಾಸಿ ಕಳೆದ 27 ವರ್ಷದ ಹಿಂದೆ ಈತನಿಗೆ ಮಂಜವ್ವ ಎಂಬಾಕೆ ಜೊತೆ ಮದುವೆಯಾಗಿತ್ತು. ಮೊದಲಿಗೆ ಸಂಸಾರ ಚೆನ್ನಾಗಿಯೇ ಇತ್ತು. ಆದ್ರೆ ಕುಡಿತದ ಗಿಳಿಗೆ ಬಿದ್ದಿದ್ದ ಗದಿಗೆಪ್ಪ ಆಸ್ತಿ ವಿಚಾರಕ್ಕೇ ಯಾದವಾಡದಲ್ಲಿ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ, ಆಗ ಗರಗ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿ ಆತನನ್ನು ಜೈಲಿಗೆ ಅಟ್ಟಿದ್ದರು, ಜೈಲಿನಲ್ಲಿ 4 ವರ್ಷ ಶಿಕ್ಷೆ ಅನುಭವಿಸಿ ಗದಿಗೆಪ್ಪ ಜೈಲಿನಿಂದ 2018 ರಲ್ಲಿ ಹೊರಬಂದಿದ್ದ.

ನಂತರ ಧಾರವಾಡದ ಕೋಳಿಕೆರಿಯಲ್ಲಿ ಮನೆ ಮಾಡಿಕೊಂಡು ತನ್ನ ಹೆಂಡತಿ ಹಾಗೂ ಮಗನ ಜೊತೆ ಮೇಸ್ತ್ರಿ ಕೆಲಸ ಮಾಡಿಕೊಂಡು ಚೆನ್ನಾಗಿದ್ದ, ಆದ್ರೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ಗದಿಗೆಪ್ಪ ಹಣಕ್ಕಾಗಿ ಹೆಂಡತಿಗೆ ಪೀಡಿಸುತ್ತಿದ್ದ, ಅದೇ ರೀತಿ ಗುರುವಾರ ಮನೆಗೆಲಸ ಮಾಡ್ತಿದ್ದ ಮಂಜವ್ವನ ಜೊತೆ ಜಗಳ ತೆಗೆದು ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಹಿಂದೆ ಕೂಡಾ ಕೊಲೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಅನುಭವಿಸಿ ಮನಪರಿವರ್ತನೆ ಮಾಡಿಕೊಳ್ಳಬೇಕಿದ್ದ ಗದಿಗೆಪ್ಪ ಮತ್ತೆ ತನ್ನ ಹೆಂಡತಿಯನ್ನೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದು ದುರಂತವೇ ಸರಿ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2022 08:48 am

Cinque Terre

122.61 K

Cinque Terre

1

ಸಂಬಂಧಿತ ಸುದ್ದಿ