ಧಾರವಾಡ: ಕರ್ತವ್ಯನಿರತ ಪೊಲೀಸರೊಬ್ಬರ ಮೇಲೆ 9 ಜನ ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ನಡೆದಿದೆ.
ಚಂದನಮಟ್ಟಿ ಗ್ರಾಮದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಕೆಲ ವ್ಯಕ್ತಿಗಳು ರಸ್ತೆ ಬಂದ್ ಮಾಡಿದ್ದರು. ಸ್ಥಳಕ್ಕೆ ಹೋದ ಧಾರವಾಡ ಗ್ರಾಮೀಣ ಠಾಣೆ ಪೊಲೀಸ್ ಚಿದಾನಂದ ಅಬ್ಬಿಗೇರಿ ಎಂಬುವವರು ರಸ್ತೆ ಬಂದ್ ಮಾಡಬೇಡಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ ಎಂದು ಹೇಳಲು ಮುಂದಾದಾಗ 9 ಜನರ ಗುಂಪು ಚಿದಾನಂದ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಅವರ ಬೈಕ್‌ನ್ನೂ ಚರಂಡಿಯಲ್ಲಿ ಬಿಸಾಕಿದ ಈ ಗುಂಪು ಚಿದಾನಂದ ಅವರ ಮೇಲೆ ತೀವ್ರ ಹಲ್ಲೆ ನಡೆಸಿದೆ.
ಈ ಸಂಬಂಧ ಶಂಕರ ಮೊರಬದ, ಶಿವರಾಜ ಮೊರಬದ, ನಾಗರಾಜ ಮೊರಬದ, ಹರೀಶ ಮುದಕಾಯಿ, ಸಹದೇವ ಚಿನ್ನಣ್ಣವರ, ಮಹಾಂತೇಶ ಕುಡೇಕರ, ಗಿರೀಶ ದೇಸಾಯಿ, ರಾಜು ಪಿರೋಜಿ, ಪ್ರಕಾಶ ಹುಲ್ಲಂಬಿ ಎಂಬುವವರ ಮೇಲೆ ಜಾತಿನಿಂದನೆ ಹಾಗೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಗ್ಗೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
27/08/2022 09:18 am