ಹುಬ್ಬಳ್ಳಿ: ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯನ್ನ ಕೊಲೆ ಮಾಡಿದ ಹಂತಕರಿಗೆ ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.
ಹೌದು.ಮಂಜುನಾಥ ಮರೆವಾಡ ಹಾಗೂ ಮಹಾಂತೇಶ ಶಿರೂರ್ ಇಬ್ಬರು ಹಂತಕರಿಗೆ ಹುಬ್ಬಳ್ಳಿಯ ಒಂದನೇ ಅಧಿಕ ದಿವಾಣಿ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯ ಆರು ದಿನ ಪೊಲೀಸ್ ಬಂಧನ ವಿಧಿಸಿ ಆದೇಶಿಸಿದೆ.
ಹಂತಕರನ್ನು ಕೋರ್ಟ್ ಗೆ ಹಾಜರಿ ಪಡಿಸಿದ ವಿದ್ಯಾನಗರ ಪೊಲೀಸರು ಪೊಲೀಸ್ ಕಸ್ಟಡಿ ಕೇಳಿ ಅರ್ಜಿ ಸಲ್ಲಿಸಿದ್ದು ಮಾನ್ಯ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 06:23 pm