ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಹತ್ಯೆ ಮಾಡಿರುವುದು ಅಮಾನವೀಯವಾಗಿದೆ. ಗುರೂಜಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಯಾರಿಗೂ ಕೂಡ ಅನ್ಯಾಯ ಮಾಡದ ಗುರೂಜಿಯನ್ನು ಹಂತಕರು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ. ಚಂದ್ರಶೇಖರ ಗುರೂಜಿಯವರನ್ನು ನಂಬಿಕೊಂಡು ಅದೆಷ್ಟೋ ಕುಟುಂಬಗಳು ಬದುಕುತ್ತಿದ್ದವು. ಆದ್ರೆ ಅವೆಲ್ಲ ಕುಟುಂಬಗಳು ಈಗ ಅನಾಥವಾಗಿವೆ.
ಇಷ್ಟೆಲ್ಲಾ ಅವರು ಬೆಳೆದರು ಕೂಡ ಸಂಬಂಧಿಕರನ್ನು ಬಿಟ್ಟಿರಲಿಲ್ಲಾ. ಸದ್ಯ ಅವರಿಲ್ಲದ್ದನ್ನು ನೆನೆಸಿಕೊಳ್ಳಲು ಆಗುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.
Kshetra Samachara
06/07/2022 06:00 pm