ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂತಿಮ ಯಾತ್ರೆಯ ಸಿದ್ಧತೆಗೆ ಕೈ ಜೋಡಿಸಿದ ಸರಳವಾಸ್ತು ಸಿಬ್ಬಂದಿ

ಹುಬ್ಬಳ್ಳಿ; ಸಾವಿರಾರು ಯುವಕ ಯುವತಿಯರ ಕುಟುಂಬಕ್ಕೆ ಬೆಳಕಾಗಿದ್ದ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಅಂತಿಮ ದರ್ಶನಕ್ಕೆ ಸಿಬ್ಬಂದಿ ಆಗಮಿಸುತ್ತಿದ್ದು, ಶವಯಾತ್ರೆಗೆ ವಾಹನವನ್ನು ಸಿಬ್ಬಂದಿಯೇ ಸಿದ್ಧಪಡಿಸುವ ಮೂಲಕ ಋಣ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೌದು. ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆಗೆ ಮಧ್ಯಾಹ್ನ ಒಂದು ಗಂಟೆ ಸಮಯ ನಿಗದಿ ಮಾಡಲಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕೂಡ ತಿಳಿಸಲಾಗಿತ್ತು. ಆದರೆ ಶವ ಮರಣೋತ್ತರ ಪರೀಕ್ಷೆ ತಡವಾಗಿರುವ ಕಾರಣ ಸುಮಾರು ಒಂದು ಗಂಟೆಗೂ ಅಧಿಕ ಕಾಲದ ಬಳಿಕ ಶವವನ್ನು ಕಿಮ್ಸ್ ನಿಂದ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಅಂತಿಮ ಯಾತ್ರೆಯ ಮೂಲಕ ಸುಳ್ಳ ರೋಡ್‌ದಲ್ಲಿರುವ ಜಮೀನಿಗೆ ತೆಗೆದುಕೊಂಡು ಹೋಗಲು ಈಗಾಗಲೇ ಸಿದ್ಧತೆ ಮಾಡಲಾಗುತ್ತಿದೆ.

ಇನ್ನೂ ಬೆಳಿಗ್ಗೆಯಿಂದ ಕಿಮ್ಸ್ ಶವಗಾರದ ಬಳಿಯಲ್ಲಿ ಜಮಾವಣೆಗೊಳ್ಳುತ್ತಿರುವ ಸಿಬ್ಬಂದಿ ಹಾಗೂ ಸಂಬಂಧಿಕರು ಗುರೂಜಿಯವರ ಅಂತಿಮ ದರ್ಶನಕ್ಕೆ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/07/2022 12:06 pm

Cinque Terre

89.72 K

Cinque Terre

0

ಸಂಬಂಧಿತ ಸುದ್ದಿ