ಧಾರವಾಡ: ಪಿಎಸ್‌ಐ ಅಕ್ರಮ ನೇಮಕಾತಿ ಸಂಬಂಧ ಸಿಐಡಿ ತಂಡ ತನಿಖೆ ನಡೆಸುತ್ತಿದ್ದು, ತನಿಖೆ ನಡೆಸಿದಷ್ಟು ಕುಳಗಳ ಹೊರ ಬೀಳುತ್ತಲೇ ಇವೆ. ಇದೀಗ ಧಾರವಾಡಕ್ಕೆ ಎಂಟ್ರಿ ಕೊಟ್ಟಿರುವ ಸಿಐಡಿ ತಂಡ ಕೋಚಿಂಗ್‌ಗೆ ಬಂದಿದ್ದ ಅಭ್ಯರ್ಥಿಯೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಎಂಜಿನಿಯರಿಂಗ್ ಹಿನ್ನೆಲೆಯುಳ್ಳ ಬಸವರಾಜ ಎಂಬ ಅಭ್ಯರ್ಥಿ ಧಾರವಾಡದ ಖಾಸಗಿ ಕೋಚಿಂಗ್ ಸೆಂಟರ್‌ಗೆ ಕೆಎಎಸ್ ಕುರಿತು ಕೋಚಿಂಗ್ ಪಡೆಯಲು ಬಂದಿದ್ದ. ಇಂದು ಆ ಖಾಸಗಿ ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿದ ಸಿಐಡಿ ತಂಡ ಬಸವರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಬೆಳ್ಳಂಬೆಳಿಗ್ಗೆಯೇ ಸಿಐಡಿ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಬಸವರಾಜನನ್ನು ಧಾರವಾಡದ ಡಿಎಆರ್ ಕ್ವಾರ್ಟರ್ಸ್‌ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/05/2022 04:32 pm