ಹುಬ್ಬಳ್ಳಿ: ಹಸುಗಳನ್ನು ದೇವರೆಂದು ಪೂಜಿಸುತ್ತಾರೆ. ಆ ಕುಟುಂಬ ದಿನಂಪ್ರತಿ ಹಾಲು ಕರೆದು ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಿತ್ತು. ಆದರೆ, ಕಳ್ಳರು ಹಸುಗಳನ್ನು ಅಪಹರಣ ಮಾಡಿ ಆ ಬಡ ಜನರ ಹೊಟ್ಟೆಗೆ ಬರೆ ಎಳೆದಿದ್ದಾರೆ.
ಹೌದು... ಹೀಗೆ ಸಂತ್ರಸ್ತರು ತಮ್ಮ ಸಂಕಟವನ್ನು ತೋಡಿಕೊಳ್ಳಲು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇವರು ಹಳೆ ಹುಬ್ಬಳ್ಳಿಯ ಅಕ್ಕಪಕ್ಕದ ನಗರ ನಿವಾಸಿಗಳು. ತಮ್ಮ ಹಸುಗಳನ್ನು ಮೇಯಿಸಲು ಹೊರಗಡೆ ಬಿಟ್ಟಿದ್ದರು.
ಸಂಜೆ ಮಳೆ ಕಾರಣ ಹಸುಗಳು ಮನೆಗೆ ಬಾರದೆ ಹೆಗ್ಗೇರಿಯ ಅಂಬೇಡ್ಕರ್ ಗ್ರೌಂಡ್ ನಲ್ಲಿ ಮಲಗಿದ್ದವು. ಇದನ್ನು ಗಮನಿಸಿದ ಕಳ್ಳರು ಟಿಪ್ಪರ್ ನಲ್ಲಿ ಜಾನುವಾರುಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ.
ಅದನ್ನೇ ಮುಂದಿಟ್ಟು ಹಸು ಮಾಲೀಕರು ಠಾಣೆಗೆ ದೂರು ದಾಖಲಿಸಲು ಬಂದಿದ್ದರು.
ಅಷ್ಟೇ ಅಲ್ಲದೆ, ವಾಣಿಜ್ಯ ನಗರಿಯಲ್ಲಿ ಕೇವಲ ಒಂದು ವಾರದಲ್ಲೇ 150ಕ್ಕೂ ಹೆಚ್ಚು ಹಸುಗಳ ಕಳ್ಳತನವಾಗಿವೆ. ಕಳ್ಳರು ರಾತ್ರಿ ವೇಳೆ ವಿದ್ಯುತ್ ತೆಗೆದು ಮನೆಯಲ್ಲಿ ಕಟ್ಟಿದ ಹಸುಗಳನ್ನೂ ಕಳ್ಳತನ ಮಾಡುತ್ತಿದ್ದಾರೆ! ಫತೇಜಾ ನಗರ, ಆನಂದನಗರ, ಇಸ್ಲಾಂಪುರ, ಗುರುನಾಥ ನಗರ, ಉಣಕಲ್, ಲೋಹಿಯಾನಗರ ಸೇರಿದಂತೆ ಹಲವೆಡೆ ಹಸುಗಳನ್ನು ಟಾರ್ಗೆಟ್ ಮಾಡಿದ್ದಾರೆ ಕಳ್ಳರು.
ಸುಮಾರು ಐದಾರು ವರ್ಷಗಳಿಂದಲೂ ಹಸುಗಳ್ಳತನ ನಿರಂತರ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ಲಾಬೂರಾಮ್, ಈ ಹಸು ಖದೀಮರ ಹುಟ್ಟಡಗಿಸಬೇಕಾಗಿದೆ.
Kshetra Samachara
28/04/2022 04:57 pm