ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿಷೇಧಾಜ್ಞೆ ಹಿಂಪಡೆದ ಪೊಲೀಸ್ ಕಮೀಷನರೇಟ್: ಪರಿಸ್ಥಿತಿ ಹತೋಟಿಗೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಷೇಧಾಜ್ಞೆ ಹಿಂದಕ್ಕೆ ಪಡೆದಿದೆ.

ಗಲಭೆ ಹಿನ್ನೆಲೆಯಲ್ಲಿ ನಗರದ ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಪರಿಸ್ಥಿತಿ ಶಾಂತಿವಾದ ಹಿನ್ನೆಲೆಯಲ್ಲಿ ಕಲಂ 144 ವಾಪಸ್ ಪಡೆದು ಪೊಲೀಸ್ ಆಯುಕ್ತ ಲಾಭುರಾಮ್ ಅವರು ಆದೇಶ ಹೊರಡಿಸಿದ್ದಾರೆ.

ಗಲಭೆ ಸಂದರ್ಭದಲ್ಲಿ ಏ.16ರಂದು ರಾತ್ರಿಯಿಂದಲೇ ನಗರದಾದ್ಯಂತ ಪೊಲೀಸ್​ ಆಯುಕ್ತರು ಸಿಆರ್​ಪಿಸಿ 144 ಕಲಂ ಅನ್ವಯ ನಿಷೇಧಾಜ್ಞೆ ಹೊರಡಿಸಿದ್ದರು. ಏ.20ರಿಂದ 23ರ ಬೆಳಗ್ಗೆ 6 ಗಂಟೆವರೆಗೆ ದಕ್ಷಿಣ ಉಪ ವಿಭಾಗದಲ್ಲಿ ನಿಷೇಧಾಜ್ಞೆ ಮುಂದುವರಿಸಿದ್ದರು. ಇದೀಗ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲೆಡೆ ನಿಷೇಧಾಜ್ಞೆ ಕೈಬಿಟ್ಟು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ ಆದೇಶಿಸಿದ್ದಾರೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/04/2022 10:16 am

Cinque Terre

59.73 K

Cinque Terre

2

ಸಂಬಂಧಿತ ಸುದ್ದಿ