ಹುಬ್ಬಳ್ಳಿ: ಮುಸ್ಲಿಂ ಸಮುದಾಯದ ಪವಿತ್ರ ಸ್ಥಳವಾದ ಮೆಕ್ಕಾ ಮದೀನಾದ ಮೇಲೆ ಕೇಸರಿ ಧ್ವಜವನ್ನು ಹಾಕಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಅಭಿಷೇಕ ಹಿರೇಮಠ ಜಾಮೀನು ಅರ್ಜಿಯನ್ನು ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ ತಿರಸ್ಕಾರ ಮಾಡಿದೆ.
ಹೌದು.. ಮೊನ್ನೆಯಷ್ಟೇ ನ್ಯಾಯಾಧೀಶರ ಮುಂದೆ ಬಂಧಿತ ಆರೋಪಿ ಅಭಿಷೇಕ ಹಿರೇಮಠನನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಲಾಗಿತ್ತು. ಅಲ್ಲದೇ ನ್ಯಾಯಾಲಯ ಪರೀಕ್ಷೆ ಬರೆಯಲು ಅವಕಾಶ ಕೂಡ ಕಲ್ಪಿಸಿತ್ತು. ಆದರೆ ಈಗ ಅಭಿಷೇಕ ಹಿರೇಮಠ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪ್ರಕರಣ ತನಿಖೆಯ ಹಂತದಲ್ಲಿರುವ ಹಿನ್ನೆಲೆಯಲ್ಲಿ ಅಭಿಷೇಕ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿದೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 07:15 pm