ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯ ಮಾಸ್ಟರ್ ಮೈಂಡ್ ವಸೀಂ ಪಠಾಣ್ ವಶಕ್ಕೆ ಪಡೆದಿರುವ ಹಳೇ ಹುಬ್ಬಳ್ಳಿಯ ಪೊಲೀಸರು ತೀವ್ರ ವಿಚಾರಣೆಗೆ ನಡೆಸಿದ್ದಾರೆ.
ಹುಬ್ಬಳ್ಳಿಯ ಇಬ್ಬರು ಡಿಸಿಪಿಗಳಿಂದ ವಿಚಾರಣೆ ಚುರುಕುಗೊಂಡಿದೆ. ಡಿಸಿಪಿ ಸಾಹಿಲ್ ಬಾಗ್ಲಾ ಹಾಗೂ ಗೋಪಾಲ ಬ್ಯಾಕೋಡ್ ನೇತೃತ್ವದಲ್ಲಿ ಬಂಧಿತ ಮಾಸ್ಟರ್ ಮೈಂಡ್ ವಸೀಂ ಪಠಾಣ್ ಗೆ ಖಾಕಿ ಡ್ರಿಲ್ ನಡೆಸಿದೆ.
ವಸೀಂ ಪಠಾಣ್ ಹಿನ್ನೆಲೆಯನ್ನು ಬಯಲಿಗೆಳಿಯುತ್ತಿರೊ ಖಾಕಿ ಪಡೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಗಲಭೆಗೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಠಾಣೆ ಮುಂದೆ ಜನ ಜಮಾವಣೆಗೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/04/2022 08:19 pm