ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವೀಡಿಯೋವೊಂದನ್ನು ಹರಿಬಿಟ್ಟು ಕೋಮುಗಲಭೆ ಸೃಷ್ಟಿಸಿರುವ ಯುವಕ ಅಭಿಷೇಕ ಹಿರೇಮಠನನ್ನು ಹುಬ್ಬಳ್ಳಿಯ ಕೋರ್ಟ್‌ಗೆ ಹಾಜರು ಪಡಿಸಲು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದುಕೊಂಡು ಬಲಾಯಿತು.
ಹೌದು.. ಮೊನ್ನೆಯಷ್ಟೇ ಮುಸ್ಲಿಂ ಸಮುದಾಯದ ಪವಿತ್ರ ಮೆಕ್ಕಾ ಮದೀನಾದ ಮಸೀದಿಯ ಮೇಲೆ ಭಗವಾ ಧ್ವಜವನ್ನು ಹಾಕಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿ ಅಭಿಷೇಕ ಹಿರೇಮಠನನ್ನ ಹುಬ್ಬಳ್ಳಿಯ ಜೆ.ಎಂ.ಎಫ್.ಸಿ ಕೋರ್ಟ್ ಗೆ ಹಾಜರು ಪಡಿಸಲಾಯಿತು.
ಬೆಳಿಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಪ್ರಕರಣಕ್ಕೆ ಕಾರಣರಾದ ಅಭಿಷೇಕ ಹಿರೇಮಠ ಎಂಬುವನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆತರಲಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/04/2022 01:55 pm