ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಬೆಟ್ಟಿಂಗ್‌ಗಾಗಿ ನಡೆದಿತ್ತು ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಐಪಿಎಲ್ ಬೆಟ್ಟಿಂಗ್ ಹಣಕ್ಕಾಗಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಧಾರವಾಡದ 4ನೇ ಹೆಚ್ಚುವರಿ ಸತ್ರ ನ್ಯಾಯಾಲಯ, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

2019 ರಲ್ಲಿ ಧಾರವಾಡದ ಫಾರೂಕ್ ಬೆಳಗಾಂವಕರ ಹಾಗೂ ಧಾರವಾಡಕ್ಕೆ ಕೊಚಿಂಗ್‌ಗೆ ಬಂದಿದ್ದ ಗೋಕಾಕನ ವಿಕ್ರಮ್ ನಾಡಗೌಡರ ಎಂಬುವರು 2 ಸಾವಿರ ರೂಪಾಯಿಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಿದ್ದರು. ಇದರಲ್ಲಿ ವಿಕ್ರಮ್ ಸೋತಿದ್ದನು. ಹೀಗಾಗಿ ಹಣ ನೀಡುವಂತೆ ಫಾರೂಕ್ ಪದೆ ಪದೇ ಒತ್ತಾಯ ಮಾಡುತ್ತಿದ್ದನು. ಆದರೂ ವಿಕ್ರಮ ಹಣ ನೀಡದಿದ್ದಾಗ 2019ರ ಏ.14 ರಂದು ವಿಕ್ರಮ್‌ನ ಮೇಲೆ ಹಲ್ಲೆ ಮಾಡಿದ್ದ ಫಾರೂಕ್ ಚಾಕೂವಿನಿಂದ ಚುಚ್ಚಿದ್ದ. ಬಳಿಕ ಚಿಕಿತ್ಸೆ ಫಲಿಸದೇ ವಿಕ್ರಮ್ ಎಂಬಾತ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಕುರಿತು ತನಿಖೆ ನಡೆಸಿ, ಇನ್ಸ್‌ಪೆಕ್ಟರ್ ಮಹಾಂತೇಶ ಬಸಾಪೂರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಅದರಂತೆ ವಿಚಾರಣೆ ನಡೆಸಿದ 4 ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಪಂಚಾಕ್ಷರಿ ಅವರು, ಆರೋಪಿ ಫಾರೂಕ್ ಬೆಳಗಾಂವಕರ್ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಅಪರಾಧಿ ಫಾರೂಕ್‌ಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದರು. ಅಲ್ಲದೇ ದಂಡದ ಮೊತ್ತವನ್ನು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ವಕೀಲ ಪ್ರಶಾಂತ ಎಸ್. ತೊರಗಲ್ ವಾದ ಮಂಡಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

11/04/2022 07:51 pm

Cinque Terre

20.05 K

Cinque Terre

1

ಸಂಬಂಧಿತ ಸುದ್ದಿ