ಧಾರವಾಡ: ಕಲಘಟಗಿ ತಾಲೂಕಿನ ಕುರವಿನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರಿಗೆ ಅದೇ ಶಾಲೆಯ ಮುಖ್ಯೋಪಾಧ್ಯಾಪಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಮುಖ್ಯೋಪಾಧ್ಯಾಪಕನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿಕ್ಷಕಿ ಪರವಾಗಿ ಗ್ರಾಮಸ್ಥರು ಧಾರವಾಡ ಡಿಡಿಪಿಐ ಕಚೇರಿಗೆ ಬಂದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಶಾಲೆಯ ಮುಖ್ಯೋಪಾಧ್ಯಾಪಕ ಪಾಟೀಲ ಎನ್ನುವವರು ಕಣವಿ ಎನ್ನುವ ಶಿಕ್ಷಕಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಈ ವಿಷಯವನ್ನು ಶಿಕ್ಷಕಿ, ಡಿಡಿಪಿಐ ಅವರ ಗಮನಕ್ಕೂ ತಂದಿದ್ದಾರೆ. ಆದರೆ, ಡಿಡಿಪಿಐ ಅವರು ಆ ಗ್ರಾಮದ ಹಿರಿಯರು ಮತ್ತು ಎಸ್‌ಡಿಎಂ ಸದಸ್ಯರನ್ನು ಸೇರಿಸಿ ಸಮಸ್ಯೆ ಬಗೆಹರಿಸಲು ಹೊರಟಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ನಾಲ್ಕು ಜನರಿಗೆ ಸಮಸ್ಯೆ ತಿಳಿಸಿ ಮತ್ತಷ್ಟು ಅದನ್ನು ದೊಡ್ಡದು ಮಾಡುವುದು ಬೇಡ. ಇಲಾಖೆ ವತಿಯಿಂದ ಮುಖ್ಯೋಪಾಧ್ಯಾಪಕನನ್ನು ವಿಚಾರಣೆ ನಡೆಸಬೇಕು ಎಂದು ಶಂಕರ ಹುದ್ದಾರ ಒತ್ತಾಯಿಸಿದರು.
ಡಿಡಿಪಿಐ ಅವರು ಕೂಡಲೇ ಕುರುವಿನಕೊಪ್ಪ ಗ್ರಾಮದ ಶಾಲೆಯ ಮುಖ್ಯೋಪಾಧ್ಯಕರನ್ನು ಕರೆದು ವಿಚಾರಣೆ ನಡೆಸಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
Kshetra Samachara
17/12/2021 12:48 pm