ಹುಬ್ಬಳ್ಳಿ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ 14 ವರ್ಷದ ಬಾಲಕನನ್ನು ಹತ್ಯೆ ಮಾಡಲು ವಿಷವುಣಿಸಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ, ಇಲ್ಲಿನ ಒಂದನೇ ಸೇಷನ್ಸ್ ಕೋರ್ಟ್ ಗೋಪನಕೊಪ್ಪದ ಸಿದ್ದವ್ವ ಅಗಡಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ.
ಹನುಮಂತಗೌಡ ಪಾಟೀಲ ಅವರ ಪಿತ್ರಾರ್ಜಿತ ಆಸ್ತಿ ಕುರಿತು ಸಹೋದರಿ ಸಿದ್ದವ್ವ ಮತ್ತು ಆಕೆಯ ಮಗ ಶ್ರೀಕಾಂತ ಆಗಾಗ ತಂಟೆ ತೆಗೆದು ಜಗಳವಾಡುತ್ತಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಹನುಮಂತಗೌಡ ಅವರ ಮೇಲಿನ ದ್ವೇಷದಿಂದ ಆರೋಪಿತರು, ಅವರ ಮಗನನ್ನು ಮನೆಗೆ ಕರೆದೊಯ್ದು ಹೇನಿನ ಔಷಧಿಯನ್ನು ಊಟದಲ್ಲಿ ಹಾಕಿ ಹತ್ಯೆಗೆ ಮುಂದಾಗಿದ್ದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಶನಿವಾರ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.
Kshetra Samachara
06/12/2021 02:39 pm