ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶೆಟ್ಟಿ ಬ್ರದರ್ಸ್‌ಗೆ ಐಟಿ ಡ್ರಿಲ್

ಧಾರವಾಡ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ ಆಪ್ತರಾದ ಯು.ಬಿ.ಶೆಟ್ಟಿ ಹಾಗೂ ಅವರ ಸಹೋದರ ಸೀತಾರಾಮ್ ಶೆಟ್ಟಿ ಅವರಿಗೆ ನಿನ್ನೆಯಿಂದ ಐಟಿ ಅಧಿಕಾರಿಗಳು ಡ್ರಿಲ್ ನಡೆಸುತ್ತಿದ್ದಾರೆ.

ನಿನ್ನೆ ಬೆಳಿಗ್ಗೆ 8 ಗಂಟೆಯಿಂದಲೇ ಐಟಿ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದು, ತಡರಾತ್ರಿವರೆಗೂ ಇಬ್ಬರೂ ಸಹೋದರರ ಮನೆಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಮತ್ತೆ ಸೀತಾರಾಮ್ ಶೆಟ್ಟಿ ಮನೆಗೆ ಹೋದ ಐಟಿ ಅಧಿಕಾರಿಗಳು ಮತ್ತೆ ಪರಿಶೀಲನಾ ಕಾರ್ಯ ನಡೆಸಿದರು. ಒಂದು ತಂಡ ಇತ್ತ ಯು.ಬಿ.ಶೆಟ್ಟಿ ಮನೆಯಲ್ಲಿ ಮುಕ್ಕಾಂ ಹೂಡಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದೆ. ಇವತ್ತೂ ಕೂಡ ಇಬ್ಬರೂ ಸಹೋದರರ ಮನೆಗೆ ಬಂದಿರುವ ಐಟಿ ಅಧಿಕಾರಿಗಳು ನಿರಂತರವಾಗಿ ಡ್ರಿಲ್ ನಡೆಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

29/10/2021 12:13 pm

Cinque Terre

104.08 K

Cinque Terre

2

ಸಂಬಂಧಿತ ಸುದ್ದಿ