ಹುಬ್ಬಳ್ಳಿ- ರೈಲು ಪ್ರಯಾಣಿಕರ 10 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ, ಆರೋಪಿಯನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ರೈಲ್ವೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಮಂಟೂರು ರಸ್ತೆಯ ನಿವಾಸಿ ಸನ್ನಿ ಸನ್ಮಾನ ಹವೀಜಾ ಎಂಬ 24 ವಯಸ್ಸಿನ ಯುವಕನೇ ಬಂಧಿತ ಆರೋಪಿ, ಹತ್ತು ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ರೈಲ್ವೆ ಎಸ್ಪಿ ಡಿ.ಆರ್.ಸಿರಿಗೌರಿ, ಡಿಎಸ್ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ರೈಲ್ವೆ ವೃತ್ತ ನಿರೀಕ್ಷಕ ಜೆ.ಎಂ.ಕಾಲೆಮಿರ್ಚಿ, ಪಿಎಸ್ಐ ಸತ್ಯಪ್ಪ, ಸಿಬ್ಬಂದಿ ನಿಂಗಪ್ಪ ಹಾವನ್ನಗೋಳ, ಬಸವರಾಜ ಯಕ್ಕಣ್ಣನವರ, ರಮೇಶ ಲಮಾಣಿ, ಪ್ರವೀಣ ಪಾಟೀಲ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Kshetra Samachara
31/01/2021 11:38 am