ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನ ದೋಚಿದ್ದ ಕಳ್ಳನ ಪತ್ತೆ ಮಾಡಿದ ಪೊಲೀಸರು

ಧಾರವಾಡ: ಅಪಾರ್ಟಮೆಂಟ್ ನಲ್ಲಿದ್ದ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಪತ್ತೆ ಮಾಡುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಬೆಳ್ಳುಬ್ಬಿ ಗ್ರಾಮದ ಅಜೀತ್ ಚಲವಾದಿ ಎಂಬಾತನೇ ಬಂಧಿತ ವ್ಯಕ್ತಿ. ಈತ ಬಾರಾಕೊಟ್ರಿ ರಸ್ತೆಯಲ್ಲಿನ ಪವನ ಸ್ಕೂಲ್ ಎದುರಿಗೆ ಇರುವ ರಾಂಕಾ ಅಪಾರ್ಟಮೆಂಟ್ ನಲ್ಲಿದ್ದ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ 50 ಗ್ರಾಂ ಚಿನ್ನದ ಸಾಮಾನುಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಈತನ ಪತ್ತೆಗಾಗಿ ತಂಡವೊಂದನ್ನು ರಚಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಅಂದಾಜು 2.50 ಲಕ್ಷ ಮೌಲ್ಯದ ಚಿನ್ನದ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

16/01/2021 10:01 pm

Cinque Terre

49.41 K

Cinque Terre

0

ಸಂಬಂಧಿತ ಸುದ್ದಿ