ಧಾರವಾಡ: ಧಾರವಾಡದ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಭೂಗತ ಪಾತಕಿ ಬಚ್ಛಾಖಾನ್ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಇಂದು ಬಿಗಿ ಬಂದೋಬಸ್ತ್ ಮಧ್ಯೆ ಆತನನ್ನು ಧಾರವಾಡದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಕೆಲ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪದ ಮೇಲೆ ಬಚ್ಛಾಖಾನ್ ನನ್ನು ಧಾರವಾಡದ ಉಪನಗರ ಠಾಣೆ ಪೊಲೀಸರು ಬಾಡಿ ವಾರಂಟ್ ಮೇಲೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ನ್ಯಾಯಾಲಯ ಬಚ್ಛಾಖಾನ್ ನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿತ್ತು. ಇಂದು ಆ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮಧ್ಯೆ ಮತ್ತೆ ಧಾರವಾಡದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Kshetra Samachara
31/12/2020 07:15 pm