ಹುಬ್ಬಳ್ಳಿ: ಪಾನ್ ಶಾಪ್ ಅಂಗಡಿಯೊಂದರ ಕಿಲಿ ಮುರಿದು, ಹಣ ಹಾಗೂ ವಸ್ತುಗಳನ್ನು ಕಳ್ಳತನ ಮಾಡಿ ಖದೀಮರು ಎಸ್ಕೇಪ್ ಆಗಿರುವ ಘಟನೆ ನಿನ್ನೆ ರಾತ್ರಿ ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಕುಸುಗಲ್ ರಸ್ತೆಯಲ್ಲಿನ ಜನತಾ ಕ್ವಾಟರ್ಸ್ ನಲ್ಲಿನ ಬಡೇಸಾಬ್ ಎಂಬಾತರ ಪಾನ್ ಶಾಪ್ ಕಳ್ಳತವಾಗಿದೆ. ಕಳ್ಳರು ತಡರಾತ್ರಿ ರಾಡ್ ನಿಂದ ಹೊಡೆದು ಅಂಗಡಿ ಕಿಲಿ ಮುರಿದು ಅಂಗಡಿಯಲ್ಲಿದ್ದ ಹಣ ಹಾಗೂ ವಸ್ತುಗಳನ್ನು ಕದ್ದ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಎಂದಿನಂತೆ ಅಂಗಡಿ ತೆರೆಯಲು ಹೋದಾಗ ಅಂಗಡಿ ಕಿಲಿ ಮುರಿದು ಬಿದ್ದದ್ದು ಕಂಡ ಬಡೆಸಾಬ್ ಗಾಬರಿಗೊಂಡು ಬಾಗಿಲು ತೆರೆದಾಗ, ಅಂಗಡಿ ಕಳ್ಳತನವಾಗಿರುವ ಸುದ್ದಿ ತಿಳಿದಿದೆ. ಅಷ್ಟೇ ಅಲ್ಲದೆ ಪಕ್ಕದಲ್ಲಿದ್ದ ಇನ್ನೊಂದು ಅಂಗಡಿಯನ್ನು ಕೂಡ ಕಳ್ಳತನ ಮಾಡಿದ್ದಾರಂತೆ. ಈ ಕುರಿತು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/08/2022 06:12 pm