ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವಿ ಸಿಂಡಿಕೇಟ್ ಸದಸ್ಯನಿಗೆ ಸಿಆರ್‌ಇ ನೋಟಿಸ್

ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರಿಗೆ ಕಿರುಕುಳ ನೀಡಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಸಿಂಡಿಕೇಟ್ ಸದಸ್ಯರೊಬ್ಬರಿಗೆ ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಸಿಆರ್‌ಇ ಸೆಲ್) ಪೊಲೀಸ್ ಅಧೀಕ್ಷಕರ ಕಚೇರಿಯಿಂದ ನೋಟಿಸ್ ಜಾರಿಯಾಗಿದೆ.

ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಸಿಂಡಿಕೇಟ್ ಸದಸ್ಯರಾಗಿರುವ ರವಿಕುಮಾರ ಮಾಳಿಗೇರ ಎಂಬುವವರಿಗೆ ದಿ.21 ರಂದು ನೋಟಿಸ್ ಜಾರಿಯಾಗಿದೆ.

ವಿಶ್ವವಿದ್ಯಾಲಯದ ವೈಜ್ಞಾನಿಕ ಉಪಕರಣಗಳ ಕೇಂದ್ರದ ಟೆಕ್ನಿಷಿಯನ್ ಗಣೇಶ ಕುಂದರಗಿ ಇವರ ಪದೋನ್ನತಿ ವಿಷಯದಲ್ಲಿ ಸಿಂಡಿಕೇಟ್ ಸದಸ್ಯ ಮಾಳಿಗೇರ ಕಿರುಕುಳ ನೀಡುತ್ತಿದ್ದಾರೆಂದು ಹೇಳಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ನಿರ್ದೇಶಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಿಆರ್‌ಸಿ ಬೆಳಗಾವಿಯ ಪೊಲೀಸ್ ಅಧೀಕ್ಷಕರ ಕಚೇರಿಯ ಪೊಲೀಸ್ ಉಪ ನಿರೀಕ್ಷಕರು, ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮಾಳಿಗೇರ ಅವರು ನೇಮಕಗೊಂಡಂದಿನಿಂದ ಹಲವರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಗುಸು ಗುಸು ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಇತ್ತಾದರೂ ಮೊದಲ ಬಾರಿ ಸಿಬ್ಬಂದಿಯೊಬ್ಬರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕದ ತಟ್ಟಿದ್ದಾರೆ.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/04/2022 05:11 pm

Cinque Terre

72.33 K

Cinque Terre

0

ಸಂಬಂಧಿತ ಸುದ್ದಿ