ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್ ಪೇದೆಯೊಬ್ಬರಿಗೆ ತಮ್ಮ ಸ್ಟೇಷನ್‌ ದಲ್ಲಿಯೇ ಎಫ್‌ಐಆರ್! ಬಿದ್ದಿದ್ದು ಯಾಕೆ?

ಹುಬ್ಬಳ್ಳಿ: ಆತ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಆರಕ್ಷಕ. ಆದರೆ ಆತ ಮಾಡಿದ್ದೇ ಬೇರೆ. ಮನೆ ಮರಳಿ ಕೊಡ್ತಿಲ್ಲ ಅಂತಾ ಹೋದ ವ್ಯಕ್ತಿಗೆ, ಜೀವ ಬೆದರಿಕೆ ಹಾಕಿದ ಆರೋಪ ಪೊಲೀಸ್ ಪೇದೆ ಮೇಲೆ ಕೇಳಿ ಬಂದಿದೆ.

ಅಲ್ಲದೇ ಆತ ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯಲ್ಲಿಯೇ ಎಫ್‌ಐಆರ್ ದಾಖಲಾಗಿದ್ದು, ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.

ಹೀಗೆ ನಮ್ಮ ಮುಂದೆ ತಮಗೆ ಆಗಿದ ಅನ್ಯಾಯದ ಬಗ್ಗೆ ಹೇಳಿಕೊಳ್ಳುತ್ತಿರುವ ಇತನ ಹೆಸರು, ಚಂದ್ರಶೇಖರ್ ಬಿರಾದಾರ. ಇವರು ಸುಮಾರು 56 ವರ್ಷದ ಚಂದ್ರಶೇಖರ್ ಆಟೋ‌ ಚಲಾವಣೆ ಮಾಡಿಕೊಂಡು, ಹುಬ್ಬಳ್ಳಿಯ ಆನಂದ ನಗರದಲ್ಲಿ ಜೀವನ ನಡೆಸುತ್ತಿದ್ದಾರೆ.

ಚಂದ್ರಶೇಖರ್ ತನ್ನ ವೃತ್ತಿಯಿಂದ ಬಂದ ಆದಾಯ ಹಾಗೂ ಬ್ಯಾಂಕ್ ನಲ್ಲಿ ಲೋನ್ ಮಾಡಿ ಆನಂದ ನಗರದಲ್ಲಿ ಮನೆ ಖರೀದಿಸಿ ವಾಸವಿದ್ದರು.

2008 ರಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಮೂರು ವರ್ಷಗಳ ಕಾಲ ಶ್ರೀಕಾಂತ್ ಕೊರಂಡವಾಡ ಎಂಬುವವರಿಗೆ ಲೀಸ್ ನೀಡಿದ್ದಾರೆ.

ಲೀಸ್ ಅವಧಿ ಮುಗಿದ ಬಳಿಕ ಶ್ರೀಕಾಂತ್ ಕೊರಂಡವಾಡ ಮನೆ ಬಿಟ್ಟು ಕೊಡದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಚಂದ್ರಶೇಖರ್ ವಿರುದ್ಧ ದೂರು ನೀಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.‌

ಇದರ ವಿಚಾರಣೆ ನಡೆಸಿದ ಹುಬ್ಬಳ್ಳಿಯ ನ್ಯಾಯಾಲಯ ದಾವೆಯನ್ನು ವಜಾಗೊಳಿಸಿ, ಚಂದ್ರಶೇಖರ್ ಗೆ ಮನೆ ನೀಡುವಂತೆ ಆದೇಶ ಮಾಡಿದೆ. ಆದರೆ, ಅದ್ಯಾವುದಕ್ಕೂ ಕ್ಯಾರೆ ಎನ್ನದ ಕೊರಂಡವಾಡ, ಮನೆ ಖಾಲಿ ಮಾಡದೇ ನನಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾನೆ.

ಈ ಕುರಿತು ದೂರು ದಾಖಲಿಸಲು ಹೋದ್ರೆ, ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ದೂರು ದಾಖಲಸಿಕೊಳ್ಳದೇ ಜೀವ ಬೆದರಿಕೆ ಹಾಕಿದ್ದಾರೆ. ಠಾಣೆಯ ಲಕ್ಷ್ಮಣ ನಾಯಕ ಎಂಬ ಪೇದೆ ಕಿರುಕುಳ ನೀಡುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ...

ಚಂದ್ರಶೇಖರ್ ಸಾಲ ಮಾಡಿ ಮನೆ ಖರೀದಿ ಮಾಡಿದ್ದು, ಸಾಲವನ್ನು ಕಟ್ಟಲು ಆಗದೇ ನಿತ್ಯ ನ್ಯಾಯಾಲಯ, ಪೊಲೀಸ್ ಠಾಣೆ ಅಲೆದಾಡುತ್ತಲೇ ಇದ್ದಾರೆ.

ಯಾವಾಗ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಚಂದ್ರಶೇಖರ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನ್ಯಾಯಾಲಯದಲ್ಲಿ ದೂರು ದಾಖಲಸಿಕೊಳ್ಳುವಂತೆ ಸೂಚನೆ ನೀಡಿದ್ದರಿಂದ ಇದೀಗ ಪೊಲೀಸ್ ಪೇದೆಯ ಮೇಲೆಯೇ A1 ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಇನ್ನು ಈ ಬಗ್ಗೆ ಪೊಲೀಸ್ ಪೇದೆಯನ್ನ ಕೇಳಿದ್ರೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿ, ನಂದೇನು ತಪ್ಪಿಲ್ಲ. ಠಾಣೆಗೆ ಅವರೇ ಬಂದು ದೂರು ನೀಡುತ್ತಿಲ್ಲ. ಅವರವರ ಜಗದಲ್ಲಿ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ ಅಂತಾರೆ...

ಇನ್ನು ಮನೆಗೆ ನೀಡಿದ್ದ ಲೀಸ್ ಅವಧಿ ಮುಗಿದು ಒಂಬತ್ತು ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿಯವರೆಗೆ ಕಾನೂನು ಹೋರಾಟ ಮಾಡಿಕೊಂಡು ಬಂದಿರೋ ಚಂದ್ರಶೇಖರ್ ಗೆ ಮನೆ ಮಾತ್ರ ಸಿಗುತ್ತಿಲ್ಲ.

ಹೀಗಾಗಿ ಜಿಲ್ಲಾಧಿಕಾರಿ, ಹುಬ್ಬಳ್ಳಿ-ಧಾರವಾಡ ನಗರ ಆಯುಕ್ತರಿಗೂ ಪತ್ರ ಬರೆದು ಮನವಿ ಮಾಡಿಕೊಂಡರೂ ನ್ಯಾಯ ಸಿಗುತ್ತಿಲ್ಲ. ನ್ಯಾಯ ಕೊಡಿಸಬೇಕಾದವರೇ ಹೀಗೆ ಮಾಡಿದ್ರೆ ಹೇಗೆ ಅನ್ನೋ ಪ್ರಶ್ನೆ ಚಂದ್ರಶೇಖರ್ ಅವರದ್ದು.

ನ್ಯಾಯಾಲಯದ ಆದೇಶಕ್ಕೂ ಕೊಡದವರಿಂದ ನನಗೆ ನ್ಯಾಯ ಕೊಡಿಸುವವರು ಯಾರು ಅನ್ನೋ ಅಳಲಿಗೆ ಇನ್ನಾದರೂ ನ್ಯಾಯ ಸಿಗೊತ್ತಾ ಕಾದು ನೋಡಬೇಕಿದೆ.....!

Edited By : Manjunath H D
Kshetra Samachara

Kshetra Samachara

19/12/2020 06:12 pm

Cinque Terre

114.15 K

Cinque Terre

10

ಸಂಬಂಧಿತ ಸುದ್ದಿ