ಹುಬ್ಬಳ್ಳಿ: ಹೆಚ್ಪಿ ಮತ್ತು ಕೆನಾನ್ ಕಂಪನಿಯ ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಪಂಕಜ್ ಕಾಪೀಯರ್ ಸರ್ವಿಸ್ ಸೆಂಟರ್ ಮೇಲೆ ಹುಬ್ಬಳ್ಳಿ ಪೊಲೀಸರು ದಾಳಿ ನಡೆಸಿ, ನಕಲಿ ಬಿಡಿಭಾಗಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿನ ಟಿಬಿ ರೋಡನಲ್ಲಿರುವ ಪಂಕಜ್ ಮಳಿಗೆಯಲ್ಲಿ ನಕಲಿ ಕಂಪ್ಯೂಟರ್, ಜೆರಾಕ್ಸ್ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದರು.ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಹೆಚ್ಪಿ ಮತ್ತು ಕೆನಾನ್ ಕಂಪನಿ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/11/2020 03:53 pm