ಅಣ್ಣಿಗೇರಿ : ಪಟ್ಟಣದ ಮಣಕವಾಡ ರಸ್ತೆ ಹಾಗೂ ಭದ್ರಾಪೂರ ಮತ್ತು ಕೋಳಿವಾಡ ರಸ್ತೆಯಲ್ಲಿರುವ ಹಳ್ಳದಲ್ಲಿ ಸಂಗ್ರಹವಾಗಿರುವ ಮರಳು (ಉಸುಗು) ನ್ನು ಅಕ್ರಮವಾಗಿ ರಾತ್ರೋ ರಾತ್ರಿ ಸಾಗಿಸುತ್ತಿದ್ದರೂ ಕೂಡಾ ಸಂಭಂದಿಸಿದ ಅಧಿಕಾರಿಗಳಂತೂ ಇದು ನಮಗೆ ಸಂಭಂದಿಸಿದಲ್ಲ ಎನ್ನುವ ಹಾಗೆ ಕಾಣುತ್ತಿದ್ದಾರೆ. ಪ್ರತಿ ದಿನ ಸರಿ ಸುಮಾರು 15ಕ್ಕೂ ಹೆಚ್ಚು ಟ್ಯಾಕ್ಟರಗಳು ರಾತ್ರೋ ರಾತ್ರಿ ಈ ಅಕ್ರಮ ಮರಳು ದಂಧೆಯಲ್ಲಿ ತೊಡಗಿವೆ. ಅಕ್ರಮ ಮರಳು ಸಾಗಾಣಿಕೆಯಿಂದ ಅಕ್ಕಪಕ್ಕದಲ್ಲಿನ ಜಮೀನುಗಳಿಗೆ ತುಂಬಾ ಹಾನಿಯಾಗುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಪಟ್ಟಣದಲ್ಲಿ ಮರಳನ್ನು ಖಾಲಿ ಮಾಡಲು ಹೋಗಿ ಮನೆಗಳ ಗೋಡೆಗಳಿಗೆ ಗುದ್ದಿ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿವೆ. ಅವಸರದಲ್ಲಿ ಹೆಚ್ಚಿನ ಪ್ರಮಾಣದ ಮರಳನ್ನು ತುಂಬಿ ಹಳ್ಳದಿಂದ ಮುಖ್ಯ ರಸ್ತೆಗೆ ಬರಲು ಟ್ಯಾಕ್ಟರ ಒದ್ದಾಡುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುಂತಿದೆ. ಇನ್ನೂ ಮುಂದಾದರು ಸಂಭಂದಿಸಿದ ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ ಖದೀಮರನ್ನು ಪತ್ತೆ ಹಚ್ಚಲು ಪ್ರಾಮಾಣಿಕತೆ ತೋರಿಸುತ್ತಾರೊ ಇಲ್ಲವೊ ಕಾದು ನೋಡಬೇಕಿದೆ...
Kshetra Samachara
28/11/2020 06:41 pm