ಹುಬ್ಬಳ್ಳಿ: ಆತ ತನ್ನ ಪತ್ನಿಯನ್ನು ನೋಡಲು ಅತ್ತೆ ಮಾವನ ಊರಿಗೆ ಬಂದಿದ್ದ. ಹೆರಿಗೆಗೆಂದು ಬಂದ ಪತ್ನಿ ಹಾಗೂ ಮಗುವನ್ನ ನೋಡಿ ಆತ ಕಳೆದ ಎರಡ್ಮೂರು ದಿನಗಳಿಂದ ಅಲ್ಲಿಯೇ ಹೆಂಡ್ತಿ ಮತ್ತು ಮುದ್ದಾದ ಮಗುವಿನೊಂದಿಗೆ ಕಾಲ ಕಳೆದಯುತ್ತಿದ್ದ. ಆದರೆ ಅದೆನಾಯ್ತೋ ಗೊತ್ತಿಲ್ಲ. ನಿನ್ನೆ ಸಂಜೆ ಹೊರಗಡೆ ಹೋಗಿ ಬರ್ತಿನಿ ಅಂತ ಪತ್ನಿ ಬಳಿ ಹೇಳಿ ಹೋಗಿದ್ದ ಆತ, ಮರಳಿ ಸಿಕ್ಕಿದ್ದು ಶವವಾಗಿ.
ಹೀಗೆ ನಿರ್ಜನ ಪ್ರದೇಶದಲ್ಲಿ ಬಿದ್ದಿರುವ ಕಲ್ಲು...ಕಲ್ಲಿನ ಪಕ್ಕದಲ್ಲೇ ರಕ್ತ..ದೃಶ್ಯಗಳನ್ನು ನೋಡಿದ್ರೇನೇ ಗೊತ್ತಾಗುತ್ತೆ ಇಲ್ಲಿ ಆಗಬಾರದ ಘಟನೆಯೊಂದು ನಡೆದಿದೆ ಅಂತ..ಹೌದು ಈ ದೃಶ್ಯ ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಅಂಚಟಗೇರಿ ಗ್ರಾಮದ ಹೊರಹೊಲಯದಲ್ಲಿ.. ಬೆಳಿಗ್ಗೆ ಭೀಕರ ಹತ್ಯೆ ಮಾಡಲಾದ ಶವವೊಂದ ಕಂಡ ಸ್ಥಳೀಯರು ಹೌಹಾರಿದ್ದರು. ಇನ್ನು ಕೊಲೆಯಾದ ವ್ಯಕ್ತಿ ಯಾರೆಂದು ಪರಿಶೀಲನೆ ಮಾಡಿದಾಗ ಗೊತ್ತಾಗಿದ್ದೆ, ಗ್ರಾಮ ಅಳಿಯ ಜಗದೀಶ್ ಕೊಲ್ಲಾಪುರ ಅಂತ. ಕಳೆದೆರಡೂ ವರ್ಷಗಳ ಹಿಂದೆ ಇದೇ ಅಂಚಟಗೇರಿ ಗ್ರಾಮದ ಅಕ್ಷತಾಳನ್ನ ಮದುವೆಯಾಗಿದ್ದ ಈ ಜಗದೀಶ್, ಹೆರಿಗೆಗೆಂದು ತವರೂ ಮನೆಗೆ ಬಂದಿದ್ದ ಪತ್ನಿಯನ್ನು ನೋಡಲು ಶನಿವಾರ ಗ್ರಾಮಕ್ಕೆ ಬಂದಿದ್ದ ಕಳೆದ ಎರಡ್ಮೂರು ದಿನಗಳಿಂದ ಗ್ರಾಮದಲ್ಲೆ ಇದ್ದ ಜಗದೀಶ್ ಎಲ್ಲರ ಜೊತೆ ಬೇರತು ಚೆನ್ನಾಗಿಯೇ ಇದ್ದ.ಅಲ್ಲದೆ ಪತ್ನಿ ಕೂಡ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗೇ ತನ್ನ ನಾಲ್ಕು ತಿಂಗಳ ಹಸೂಗೂಸಿನೊಂದಿಗೆ ಕಾಲಕಳೆಯುತ್ತಾ ಸಂತೋಷದಿಂಲೇ ಇದ್ದ. ಆದರೆ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋಗಿ ಬರ್ತಿನಿ ಎಂದು ಪತ್ನಿಗೆ ಹೇಳಿದ್ದ ಜಗದೀಶ್ ತಡರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ. ಅತ್ತ ಆತನ ಊರಾದ ಹಾನಗಲ್ ಗೆ ಫೋನ್ ಮಾಡಿದ್ರು ಸುಳಿವು ಇರಲಿಲ್ಲ. ಆದ್ರೆ ಬೆಳ್ಳಬೆಳಿಗ್ಗೆ ವಾಕಿಂಗ್ ಹೋದ ಜನರಿಗೆ ರಸ್ತೆಯಲ್ಲಿ ಶವ ಬಿದ್ದಿದ್ದು ಗೊತ್ತಾಗಿದೆ. ಆದರೆ ಅದ್ಯಾರು ಕೊಂದ್ರು ಯಾಕೆ ಕೊಂದ್ರು ಎನ್ನೋದು ಮಾತ್ರ ಹಣಕಾಸಿನ ವಿಚಾರ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಇನ್ನೂ ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ನಿವಾಸಿಯಾಗಿದ್ದ ಜಗದೀಶ್, ಕಂಟಿಂಗ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ, ಅತ್ತ ತನ್ನ ಊರಿನಲ್ಲಿಯೂ ಯಾವುದೇ ಗಲಾಟೆ ಜಗಳ ಎನ್ನೋ ಗೋಜಿಗೆ ಹೋದವನಲ್ಲವಂತೆ. ಹೀಗಾಗೇ ಕಳೆದ ಶನಿವಾರ ಪತ್ನಿ ಹಾಗು ಮಗು ನೋಡಿಕೊಂಡು ಬರ್ತಿನಿ ಎಂದು ಪತ್ನಿಯ ಊರಿಗೆ ಬಂದಿದ್ದಾನೆ. ಅಷ್ಟೆ ಎರಡ್ಮೂರು ದಿನ ಕಳೆಯುತ್ತದ್ದಂತೆ ಶವವಾಗಿ ಸಿಕ್ಕಿದ್ದು ಕುಟುಂಬಸ್ಥರಿಗೆ ಬಡಸಿಡಿಲು ಬಂಡಿದಂತಾಗಿದೆ.
ಹತ್ಯೆಯ ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ನಿನ್ನೆ ಸಂಜೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಜಗದೀಶ್ ಹೊರಹೊಗಿದ್ದೇಕೆ ಎನ್ನೋದೆ ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಅದೇ ಏನೇ ಇರಲಿ ತನ್ನ ಪತ್ನಿ ಹಾಗೂ ಮಗುವನ್ನು ನೋಡೋಕೆ ಬಂದಿದ್ದ ಜಗದೀಶ್ ಬೀದಿ ಹೆಣವಾಗಿದ್ದು ಒಂದಡೆಯಾದ್ರೆ ಇತ್ತು ಏನು ಅರಿಯದ ಮುದ್ದು ಕಂದಮ್ಮನಿಗೆ ಇನ್ಮುಂದೆ ಅಪ್ಪ ಇಲ್ಲ ಎನ್ನೋ ವಿಚಾರ ಹೇಗೆ ತಿಳಿಸಲಿ ಎನ್ನೋ ನೋವು ಈ ಬಾಣಂತಿ ಪತ್ನಿಯದ್ದು.
Kshetra Samachara
24/11/2020 05:25 pm