ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ?

ಅಣ್ಣಿಗೇರಿ: ಬೆಳ್ಳಂಬೆಳಿಗ್ಗೆ ದೇವಸ್ಥಾನಕ್ಕೆ ಕನ್ನ ಹಾಕಿದ ಘಟನೆ ಅಣ್ಣಿಗೇರಿ ತಾಲ್ಲೂಕಿನ ಕೊಂಡಿಕೊಪ್ಪ ಗ್ರಾಮದ ಶ್ಯಾಗೊಟಿ ಪ್ಲಾಟ್‌ನಲ್ಲಿ ನಡೆದಿದೆ.

ದುರ್ಗಾದೇವಿಗೆ ವಾರದಲ್ಲಿ ಎರಡು ಬಾರಿ ಬಂಗಾರದ ಆಭರಣಗಳನ್ನು ಹಾಕಲಾಗುತ್ತದೆ. ನಿನ್ನೇಯೂ ಬೆಳಿಗ್ಗೆ ಅರ್ಚಕರು ದೇವರಿಗೆ ಪೂಜೆ ಮಾಡಿ ನಂತರ ಬಂಗಾರದ ಆಭರಣಗಳನ್ನು ಹಾಕಿದ್ದರು. ಸಂಜೆ ಮನೆಗೆ ಹೋಗುವ ಸಮಯದಲ್ಲಿ ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ದೇವಸ್ಥಾನಕ್ಕೆ ಕಳ್ಳತನಕ್ಕೇ ಸ್ಕೇಚ್ ಹಾಕಿ ಕಳ್ಳತನ ಮಾಡಲು ಪ್ಲಾನ್ ಮಾಡಿದ್ದರು. ದೇವಾಲಯದ ಹೊರಗಿನ ಟೈಲ್ಸ್ ಒಡೆದು ಬಾಗಿಲು ತೆಗೆದು, ಇನ್ನೇನು ಮೂರ್ತಿಯ ಮೇಲೆ ಬಂಗಾರದ ಆಭರಣಗಳನ್ನು ತಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಬಂಗಾರದ ಆಭರಣಗಳು ಕಳ್ಳರಿಗೆ ಸಿಕ್ಕಿಲ್ಲ. ಬದಲಿಗೆ ಕೈಗೆ ಸಿಕ್ಕ ಹುಂಡಿಯಲ್ಲಿನ ಹಣವನ್ನು ಇನ್ನಿತರ ವಸ್ತುಗಳನ್ನು ತಗೆದುಕೊಂಡು ಪರಾರಿಯಾಗಿದ್ದಾರೆ.

ಇದನ್ನು ಗಮಿನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಣ್ಣಿಗೇರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ದೇವಾಲಯದ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

22/11/2020 01:00 pm

Cinque Terre

84.54 K

Cinque Terre

1

ಸಂಬಂಧಿತ ಸುದ್ದಿ