ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಸಿಬಿಐ ತನಿಖೆ ಮುಂದುವರೆದಿದೆ. ಇವತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಹಾಗೂ ಸೋದರ ಮಾವ ಚಂದ್ರಶೇಖರ ಇಂಡಿ ಮತ್ತು ಆರೋಪಿ ಬಸವರಾಜ್ ಮುತ್ತಗಿ ವಿಚಾರಣೆಗೆ ಹಾಜರಾಗಿದ್ದಾರೆ. ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಗೆ ಅಳಿಯ ಮಾವ ಇಬ್ಬರೂ ಒಂದೇ ಕಾರಿನಲ್ಲಿ ಬಂದರು. ಯೋಗೀಶ್ ಗೌಡ ಹತ್ಯೆಯಲ್ಲಿನ ಆರೋಪದ ಮೇರೆಗೆ ಈ ಮೂವರನ್ನು ಮತ್ತೆ ಠಾಣೆಗೆ ಕರೆಸಿಕೊಂಡ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
22/11/2020 11:51 am