ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಸರಗಳ್ಳತನ, ಬೈಕ್ ಕಳ್ಳತನ, ಕಾರು ಕಳ್ಳತನ ಕೇಳಿದ್ದೇವೆ ಈಗ ಮತ್ತೊಂದು ರೀತಿಯಲ್ಲಿ ಕಳ್ಳತನ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬರುತ್ತಿವೆ...
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಕಾರು ಕಳ್ಳತನ ನಡೆಯುತ್ತಿದ್ದವು ಈಗ ಕಾರು ಗಾಜು ಒಡೆದು.ಕಾರಿನಲ್ಲಿರುವ ಸೌಂಡ್ ಸಿಸ್ಟಮ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖದೀಮರು ಕದ್ದು ಪರಾರಿಯಾಗುತ್ತಿದ್ದಾರೆ. ಎಲ್ಲೆಂದರಲ್ಲಿ ಖದೀಮರ ಕೈಚಳಕ ಮೀತಿಮೀರಿದ್ದು,ಮನೆಯ ಮುಂದೆ ವಾಹನ ನಿಲ್ಲಿಸಿದರು ಆತಂಕದಿಂದ ಜೀವನ ನಡೆಸಬೇಕಾಗಿದೆ.
ಮನೆಯ ಕಾಂಪೌಂಡ್ ಒಳಗೆ ವಾಹನ ನಿಲ್ಲಿಸಿದ್ದರೂ ಕೂಡ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ ಕಳ್ಳರು ಗಾಜು ಒಡೆದು ಹಾಳು ಮಾಡಿ ಸೌಂಡ್ ಸಿಸ್ಟಮ್ ತೆಗೆದುಕೊಂಡು ಹೋಗುತ್ತಿದ್ದಾರೆ.ಈ ಬಗ್ಗೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತರ ಗಮನ ಹರಿಸಿ ಬಿಸಿ ಮುಟ್ಟಿಸಬೇಕಿದೆ.
Kshetra Samachara
27/10/2020 02:01 pm