ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರ್ಷ ಕಳೆದರೂ ಪತ್ತೆಯಾಗದ ರೈಲ್ವೆ ನಿಲ್ದಾಣದ ಸ್ಫೋಟ ಪ್ರಕರಣದ ಆರೋಪಿಗಳು

ಹುಬ್ಬಳ್ಳಿ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟಕ ವಸ್ತು ವೊಂದು ಸ್ಫೋಟ ಗೊಂಡು ಒಂದು ವರ್ಷ ಕಳೆದಿದೆ.‌ಆದರೂ ಇದುವರೆಗೂ ಆರೋಪಿಗಳನ್ನು‌ ಬಂಧಿಸಲು ಸಾಧ್ಯವಾಗಿಲ್ಲ.

ಹೌದು...ಅಕ್ಟೋಬರ್ 21, 2019 ರಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಕ್ಷರಶ: ನಡುಗಿ ಹೋಗಿತ್ತು. ಆ ಒಂದು ಸ್ಪೋಟ ಜನರಲ್ಲಿ ಭಯ ಸೃಷ್ಟಿ ಮಾಡಿತ್ತು.

ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ವಿಜಯವಾಡ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಪೋಟಕ ತುಂಬಿದ್ದ ಬಾಕ್ಸ್ ಗಳನ್ನ ಇಡಲಾಗಿತ್ತು.

ಅದರಲ್ಲಿ ಒಂದು ಬಾಕ್ಸ್ ತೆರೆಯುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿತ್ತು.

ಒಂದು ಕ್ಷಣ ರೈಲ್ವೆ ನಿಲ್ದಾಣವೇ ಅಲ್ಲೋಲ ಕಲ್ಲೋಲವಾಗಿತ್ತು. ಈ ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು.

ಘಟನೆ ನಡೆದು ಒಂದು ವರ್ಷ ಕಳೆದರೂ, ತನಿಖಾ ತಂಡಕ್ಕೆ ಒಂದೇ ಒಂದು ಸಣ್ಣ ಸುಳಿವು ಸಿಕ್ಕಿಲ್ಲ. ಬಾಕ್ಸ್ ಮೇಲಿದ್ದ ಕೊಲ್ಲಾಪುರ ಶಾಸಕರ ವಿಚಾರಣೆಯು ನಡೆದಿಲ್ಲ.

Edited By : Manjunath H D
Kshetra Samachara

Kshetra Samachara

21/10/2020 12:13 pm

Cinque Terre

46.58 K

Cinque Terre

2

ಸಂಬಂಧಿತ ಸುದ್ದಿ