ಹುಬ್ಬಳ್ಳಿ : ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ ದಿನದಿಂದ ದಿನಕ್ಕೆ ಬೈಕ್ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಲೆ ಇವೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳು ಬೆಳಗಾಗುವುದರೊಳಗೆ ಕಳ್ಳರು ಕದ್ದು ಪರಾರಿಯಾಗುತ್ತಿದ್ದಾರೆ. ಹೀಗೆ ಕಳೆದ ಎರಡು ದಿನಗಳ ಅವಧಿಯಲ್ಲಿ ಮೂರು ಬೈಕ್ ಗಳು ಕಳ್ಳತನವಾಗಿವೆ. ಇನ್ನು ಮೊನ್ನೆ ಒಂದೇ ದಿನದಲ್ಲಿ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್ ಗಳು ಕಳ್ಳತನವಾಗಿದ್ದರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ ಆಗಿದೆ.
ಇನ್ನು ಈ ಬೈಕ್ ಕಳ್ಳತನದ ವಿಡಿಯೋ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯುವಕನೊಬ್ಬ ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಮನೆ ಮುಂದೆ ಬೈಕ್ ನಿಲ್ಲಿಸಲು ಭಯಪಡುವಂತಾಗಿದೆ.
Kshetra Samachara
14/10/2020 12:11 pm