ಹುಬ್ಬಳ್ಳಿ: ಗುರುವಾರ ತಡರಾತ್ರಿ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಟಕರ ಓಣಿಯಲ್ಲಿ ಬೆಪಾರಿ ಸಹೋದರರ ಮೇಲೆ ನಡೆದ ತಲ್ವಾರ್ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಡಿಸಿಪಿ ಶಾಹಿಲ್ ಬಾಗ್ಲಾ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಪುಂಡರು ಸ್ಥಳದಲ್ಲಿದ್ದ ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಐದು ವಾಹನಗಳ ಗ್ಲಾಸ್ ಸಂಪೂರ್ಣವಾಗಿ ಪುಡಿ ಪುಡಿಯಾಗಿವೆ. ಸದ್ಯ ಈ ದ್ರಶ್ಯವನ್ನು ಕಣ್ಣಾರೆ ಕಂಡ ಕಟಕರ ಓಣಿಯ ಜನ ಭಯಭೀತರಾಗಿದ್ದು ಮನೆಯಿಂದ ಹೊರ ಬರಲು ಹೆದರುವ ವಾತಾವರಣ ನಿರ್ಮಾಣವಾಗಿದೆ.
ಇನ್ನು ವಾಹನಗಳ ಮೇಲೆ ನಡೆದಿರೋ ದಾಳಿಯನ್ನು ನೋಡಿದ್ರೆ ಮೇಲ್ನೋಟಕ್ಕೆ ವ್ಯವಹಾರಿಕವಾಗಿ ಈ ಗಲಾಟೆ ನಡೆದಿದೆ ಎಂಬುದು ಕಂಡು ಬರುತ್ತಿದೆ. ಸದ್ಯ ಗಂಭೀರವಾಗಿ ಗಾಯಗೊಂಡ ಬೆಪಾರಿ ಸಹೋದರರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನೆ ನಡೆದ ಸ್ಥಳದಲ್ಲಿನ ಸದ್ಯದ ಪರಿಸ್ಥಿತಿಯನ್ನು ನಮ್ಮ ವರದಿಗಾರ ವಿನಯ ರೆಡ್ಡಿ ಕೊಟ್ಟ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/10/2022 05:02 pm