ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಚಾಕು ಇರಿತವಾಗಿದ್ದು,ರಕ್ತಸಿಕ್ತ ಪರಿಸ್ಥಿತಿಯಲ್ಲಿಯೇ ವ್ಯಕ್ತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಂದಿರುವ ಘಟನೆ ಇಂದು ನಡೆದಿದೆ.
ಹೌದು.. ಕಸಬಾ ಠಾಣಾ ವ್ಯಾಪ್ತಿಯ ಕೊತಂಬರಿ ಆಟೋ ಸ್ಟ್ಯಾಂಡ್ ಬಳಿ ಚಾಕು ಇರಿತವಾಗಿದ್ದು, ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಎಂಬುವವರೇ ಹಲ್ಲೆಗೊಳಾಗಿದ್ದು, ಇರ್ಫಾನ್ ಎಂಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕಾಗಿ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.
ಆಟೋ ಸ್ಟ್ಯಾಂಡ್ ಬಳಿ ಮಹಮ್ಮದ್ ನಿಂತಿದ್ದಾಗ ಜಗಳ ತೆಗೆದು ಎದೆಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಮಹಮ್ಮದ್ ಎದೆಯಿಂದ ರಕ್ತ ಸುರಿಯುತ್ತಿದ್ದ ಹಿನ್ನೆಲೆ ಮಾಹಿತಿ ಪಡೆದ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 02:01 pm