ಹುಬ್ಬಳ್ಳಿ: ವಾಸ್ತು ಶಾಸ್ತ್ರಜ್ಞ ಎಂದೇ ದೇಶಾದ್ಯಂತ ಹೆಸರು ಮಾಡಿದ್ದ ಚಂದ್ರಶೇಖರ ಗುರೂಜಿಯವರು ನಿನ್ನೆಯಷ್ಟೇ ಕೊಲೆಯಾಗಿ ಈಗ ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ.
ಹೌದು. ಕಿಮ್ಸ್ ಶವಗಾರದಿಂದ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸುಳ್ಳ ರಸ್ತೆಯಲ್ಲಿರುವ ಜಮೀನಿಗೆ ತೆಗೆದುಕೊಂಡು ಬಂದು ಅಂತ್ಯಕ್ರಿಯೆ ನೆರವೇರಿಸಿದ್ದು, ಅಗಲಿದ ಗುರೂಜಿ ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ.
ಮಠಾಧೀಶರ ಹಾಗೂ ಕುಟುಂಬದವರ ಮತ್ತು ಸಿಜಿ ಪರಿವಾರದ ಸಿಬ್ಬಂದಿಯ ಸಮ್ಮುಖದಲ್ಲಿ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆ ನೆರವೇರಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 05:35 pm