ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ನಡೆಗೆ ಬೇಸತ್ತ ಸಾರಿಗೆ ಸಂಸ್ಥೆ ಅಧ್ಯಕ್ಷ: ಸಾಲ ಕೊಡದಂತೆ ಮನವಿ

ಹುಬ್ಬಳ್ಳಿ: ನನ್ನ ಮಗನಿಗೆ ಯಾರು ಸಾಲ ಕೊಡಬೇಡಿ. ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲಾ ಆಸ್ತಿಯನ್ನು ಮಾರಿಕೊಂಡಿದ್ದಾನೆ. ಅಲ್ಲದೆ ಜನರಿಗೆ ಸುಳ್ಳು ಹೇಳಿ ಸಾಲ ಪಡೆದುಕೊಳ್ಳುತ್ತಿದ್ದಾನೆ ಎಂದು ತನ್ನ ಮಗನ ಬಗ್ಗೆ NWKRTC ಚೇರಮನ್ ವಿ.ಎಸ್.ಪಾಟೀಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಹೌದು. ಮಗನ ನಡೆಯಿಂದ ಬೇಸತ್ತ ಮಾಜಿ ಶಾಸಕ ಪಾಟೀಲ್ ಅವರು ನನ್ನ ಸ್ವಂತ ಮಗನೆ ನನ್ನ ಹೆಸರನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಾನೆ. ನನ್ನ ಪುತ್ರ ಬಾಪೂಗೌಡ ಪಾಟೀಲ್ ಅವರಿಗೆ ಯಾರೂ ಕೂಡ ಸಾಲ ಕೊಡಬೇಡಿ ಎಂದು ಸಾರಿಗೆ ಸಂಸ್ಥೆಯ ಲೆಟರ್ ಹೆಡ್ ಮೂಲಕ ಮನವಿ ಮಾಡಿದ್ದಾರೆ.

ಪದವಿಧರನಾದ ನನ್ನ ಮಗ ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದಿದ್ದಾನೆ. ಕೋಟಿಗಟ್ಟಲೆ ಸಾಲ ಮಾಡಿ ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಿದ್ದಾನೆ. ಅವರ ಮಾನಸಿಕ ಸ್ಥಿತಿ ಸರಿ ಇಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಸುಳ್ಳು ಹೇಳಿ ಸಾಲ ಪಡೆಯುತ್ತಿದ್ದಾನೆ. ಜನರು ನನ್ನ ಮಗನ ಮಾತಿಗೆ ಮರುಳಾಗಿ ಸಾಲಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/07/2022 01:36 pm

Cinque Terre

281.23 K

Cinque Terre

8

ಸಂಬಂಧಿತ ಸುದ್ದಿ