ಧಾರವಾಡ: ಏಯ್ ಮೇರಿ ವತನ್ ಕಿ ಲೋಗೋಂ ಹಾಡಿನ ಖ್ಯಾತಿಯ, ಭಾರತ ರತ್ನ ಲತಾ ಮಂಗೇಶ್ಕರ್ ಅವರು ನಿನ್ನೆ ತಮ್ಮ ಗಾನಸುಧೆ ನಿಲ್ಲಿಸಿ ಇನ್ನೆಂದೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ತಮ್ಮ ಹಾಡಿನ ಮೂಲಕವೇ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರ ಕಣ್ಣುಗಳನ್ನು ಒದ್ದೆ ಮಾಡಿಸಿದ್ದ ಲತಾ ಮಂಗೇಶ್ಕರ್ ಅವರಿಗೆ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹೀಗೆ ಕಾಣಿಸುತ್ತಿರುವ ಲತಾ ಮಂಗೇಷ್ಕರ್ ಅವರ ಭಾವಚಿತ್ರ ಸ್ಟಿಕರ್‌ನಲ್ಲಿ ಮಾಡಿಸಿದ್ದಲ್ಲ. ಬದಲಾಗಿ ಕೈಯಿಂದ ಬಿಡಿಸಿದ ಚಿತ್ರ. ಮಂಜುನಾಥ ಹಿರೇಮಠ ಅವರು ತಮ್ಮ ವಾಹನದ ಮೇಲೆ ಡಸ್ಟ್ ಆರ್ಟ್ ಮಾಡುವ ಮೂಲಕ ಗಾನ ಕೋಗಿಲೆಗೆ ಕಲೆಯ ಮೂಲಕ ಕಲಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮ್ಮ ವಾಹನದ ಹಿಂಭಾಗದ ಗಾಜಿನ ಮೇಲೆ ಧೂಳಿನಲ್ಲಿ ಥೇಟ್ ಲತಾ ಮಂಗೇಶ್ಕರ್ ಅವರಂತೆಯೇ ಭಾವಚಿತ್ರ ಬಿಡಿಸಿ ಎಲ್ಲರ ಗಮನಸೆಳೆದರು. ಅಲ್ಲದೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/02/2022 02:21 pm