ಹುಬ್ಬಳ್ಳಿ: ಅವರೆಲ್ಲರೂ ನೂರು ಇನ್ನೂರು ರೂಪಾಯಿ ದಿನಗೂಲಿ ಆಧಾರದ ಮೇಲೆ ಹೊರಗುತ್ತಿಗೆಯಲ್ಲಿ ದುಡಿಯುವ ಚಾಲಕರು. ಬರುವ ಕಡಿಮೆ ಸಂಬಳದಲ್ಲಿಯೇ ಜೀವನ ನಡೆಸಬೇಕಿದೆ. ಹೀಗಿದ್ದರೂ ಕೂಡ ಈ ಹೊರಗುತ್ತಿಗೆಯವರು ತಮ್ಮ ಸಂಬಳ ಪಡೆಯಲು ಸಾವಿರಾರು ರೂಪಾಯಿ ಕಮೀಷನ್ ಕೊಡಬೇಕಿದೆ. ಕಮೀಷನ್ ಕೊಡದೇ ಇದ್ದರೇ ವೇತನವೂ ಇಲ್ಲ. ಉದ್ಯೋಗವೂ ಇಲ್ಲ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಪೋಟಕ ಮಾಹಿತಿ.
ಹೀಗೆ ಪಾಲಿಕೆ ಆಯುಕ್ತರ ಮುಂದೆ ಕಣ್ಣೀರು ಹಾಕುತ್ತಿರುವ ಚಾಲಕರು. ಏಜೆನ್ಸಿಗಳ ದೌರ್ಜನ್ಯದಿಂದ ದಿನವೂ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿರುವ ನೌಕರರು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ.
ಅವಳಿನಗರದ ಸ್ವಚ್ಚತೆಯ ಹಿನ್ನೆಲೆ 193 ಆಟೋ ಟಿಪ್ಪರ್ ಕಾರ್ಯನಿರ್ವಹಿಸುತ್ತಿದ್ದು, ಈ ಆಟೋ ಟಿಪ್ಪರ್ ಚಾಲಕರು ತಮ್ಮ ವೇತನ ಪಡೆಯಲು ಪ್ರತಿ ತಿಂಗಳು ಮೂರು ಸಾವಿರ ಕಮಿಷನ್ ಕೊಡಬೇಕಿದೆ. ಇನ್ನೂ ವೇತನದಲ್ಲಿ ಕೂಡ ಬಹುದೊಡ್ಡ ಹಗರಣವೇ ನಡೆದಿದ್ದು, ಚಾಲಕರಿಗೆ 22,505 ಬರಬೇಕಿರುವ ವೇತನ ಆದರೆ ಅವರಿಗೆ ಬರುವುದು ಕೇವಲ 14 ಸಾವಿರ ಅದರಲ್ಲೂ ಕೂಡ 3000 ಕಮೀಷನ್ ಮೊದಲೇ ಕಟ್ ಆಗುತ್ತಿದೆ. ಇದರಿಂದ ಚಾಲಕರು ಕಮೀಷನ್ ಕರಾಳ ದಂಧೆಗೆ ಬೇಸತ್ತಿದ್ದಾರೆ.
ಇನ್ನೂ ಪಾಲಿಕೆಯಲ್ಲಿ ಏಜೆನ್ಸಿಗಳ ದಬ್ಬಾಳಿಕೆ ಹೆಚ್ಚಾಗಿದ್ದು,55 ಏಜೆನ್ಸಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಏಜೆನ್ಸಿಗಳು ನೌಕರರಿಗೆ ಪೂರ್ಣ ಪ್ರಮಾಣದ ವೇತನ ನೀಡುವುದಿಲ್ಲ.18000 ರೂ ವೇತನ, 14000 ಕೈಗೆ ಸಿಗುವ ವೇತನ. ಇದರಲ್ಲಿ ಏಜೆನ್ಸಿಗಳು 3000 ರೂಪಾಯಿ ವಸೂಲಿ ಮಾಡುತ್ತಿದ್ದು, ಶಾಸಕ ಪ್ರಸಾದ್ ಅಬ್ಬಯ್ಯ ಎದುರು ಅಳಲು ತೋಡಿಕೊಂಡಿದ್ದಾರೆ. ಹತ್ತರಿಂದ ಹದಿನೈದು ವರ್ಷಗಳ ಸೇವೆ ಸಲ್ಲಿಸಿದ ಪೌರ ಕಾರ್ಮಿಕರು ತಿಂಗಳ ಮಾಮೂಲಿ ನೀಡದೆ ಇದರೆ ಕೆಲಸದಿಂದ ಕಿತ್ತು ಹಾಕುವ ಏಜೆನ್ಸಿಗಳ ಭಯದಲ್ಲಿಯೇ ಬದುಕುತ್ತಿದ್ದಾರೆ. ಆದರೆ ವಿಪರ್ಯಾಸಕರ ಸಂಗತಿ ಅಂದರೇ ಅಧಿಕಾರಗಳ ಹೆಸರಲ್ಲಿ ಗುತ್ತಿಗೆದಾರರು ಕಮಿಷನ್ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಕಮೀಷನ್ ದಂಧೆಗೆ ಅದೆಷ್ಟೋ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಮನೆಗೆ ರೇಷನ್ ತೆಗೆದುಕೊಂಡು ಹೋಗದ ಗಂಡನ ನೋಡಿ ಹೆಂಡತಿ. ಮಕ್ಕಳ ಆಸೆಯನ್ನು ನೀಗಿಸದ ತಂದೆಯ ಸ್ಥಿತಿಗೆ ಈ ಚಾಲಕರು ಬಂದು ನಿಂತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಏಜೆನ್ಸಿ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
09/08/2022 07:46 am