ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಾರ್‌ ಮುಂದೆ ಲಂಚ ಪಡೆಯುತ್ತಿದ್ದ ಪಾಲಿಕೆ ಸಿಬ್ಬಂದಿ: ಎಸಿಬಿ ಅಧಿಕಾರಿಗಳ ದಾಳಿ

ಧಾರವಾಡ: ಲಂಚ ಪಡೆಯುವಾಗ ಧಾರವಾಡ ಪಾಲಿಕೆ ಸಿಬ್ಬಂದಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಧಾರವಾಡ ನಗರದ ವಲಯ ಕಚೇರಿ 2 ರಲ್ಲಿ ನಡೆದಿದೆ.

ಧಾರವಾಡ ವಲಯ ಕಚೇರಿ 2ರ ಬಿಲ್ ಕಲೆಕ್ಟರ್ ವೆಂಕಟೇಶ ಎಂಬುವವರೇ ಎಸಿಬಿ ಬಲೆಗೆ ಬಿದ್ದವರು. ಇವರು ಪಹಣಿ ಪತ್ರ ಕೊಡಲು ಧಾರವಾಡ ಜಿಲ್ಲೆಯ ಕಲಘಟಗಿ ತಹಶೀಲ್ದಾರ ಕಚೇರಿ ಸಿಬ್ಬಂದಿ ಗುರುರಾಜ್ ಗಾಳಿ ಎಂಬುವವರಿಗೆ ಲಂಚದ ಬೇಡಿಕೆ ಇಟ್ಟಿದ್ದರು.

ವೆಂಕಟೇಶ ಅವರು ಪಹಣಿ ಪತ್ರ ನೀಡಲು 6 ಸಾವಿರ ಲಂಚ ಕೇಳಿದ್ದರು. ಅಲ್ಲದೇ ಹಣ ಕೊಡಲು ಬಾರ್ ಮತ್ತು ರೆಸ್ಟೋರೆಂಟ್‌ಗೆ ಕರೆದಿದ್ದರು. ಈ ವಿಷಯವನ್ನು ಗುರುರಾಜ್ ಎಸಿಬಿ ಅಧಿಕಾರಿಗಳಿಗೆ ತಿಳಿದ್ದರು. ವೆಂಕಟೇಶ್ ಅವರಿಗೆ ಗುರುರಾಜ್ ಅವರು ಬಾರ್‌ ಮುಂದೆ ಲಂಚ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ಆರೋಪಿ ಎಸಿಬಿ ಅಧಿಕಾರಿಗಳ ವಶದಲ್ಲಿದ್ದಾನೆ.

Edited By : Nagaraj Tulugeri
Kshetra Samachara

Kshetra Samachara

06/08/2022 08:33 pm

Cinque Terre

32.37 K

Cinque Terre

14

ಸಂಬಂಧಿತ ಸುದ್ದಿ