ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಗ್ರಾಮ.ಪಂ ಚುನಾವಣೆ : ಹಳ್ಳಿಗಳಲ್ಲಿ ಜೋರಾಗಿದೆ ವಾಮಾಚಾರದ ಕಾಟ

ಧಾರವಾಡ : ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದೆ. ಗ್ರಾಮೀಣ ಮಟ್ಟದಲ್ಲಿ ತೀವ್ರ ಜಿದ್ದಾಜಿದ್ದಿನ ಈ ಸ್ಪರ್ಧೆಯಲ್ಲಿ ಗೆಲ್ಲಲು ಹಲವು ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳು, ವಿರೋಧಿಗಳನ್ನು ಮಣಿಸಲು ಮಾಟ, ಮಂತ್ರದ ಮೊರೆ ಹೋಗುತ್ತಿದ್ದಾರೆ.

ಡಿ.22 ಪ್ರಥಮ ಹಂತ ಹಾಗೂ ಡಿ.27 ರಂದು ನಡೆಯುವ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಭರ್ಜರಿ ತಯಾರಿ ನಡೆಸುತ್ತಿದ್ರೆ.ಇತ್ತ ಕೆಲವರು ಪ್ರಚಾರ ಅಥವಾ ವಾಮಾ ಮಾರ್ಗ ಬಳಸಿ ಗೆಲ್ಲಲು ಪ್ರಯತ್ನಿಸುತ್ತಿದ್ದು,ಧಾರವಾಡ ಜಿಲ್ಲೆ ಗ್ರಾಮಗಳಲ್ಲಿ ವಾಮಾಚರ ಬೆಳಕಿಗೆ ಬಂದಿದೆ.

ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿವೆ. ಅಂಬ್ಲಿಕೊಪ್ಪ ಗ್ರಾಮದ ಚುನಾವಣೆ ಕಣದಲ್ಲಿರುವ ಅಭ್ಯರ್ಥಿ ಮಂಜುಳಾ ವಡ್ಡರ್ ಮನೆ ಮುಂದೆ ತಾಯತ, ನಿಂಬೆ ಹಣ್ಣು, ಸಾಸಿವೆ ಇಟ್ಟು ವಾಮಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Edited By : Nagesh Gaonkar
Kshetra Samachara

Kshetra Samachara

20/12/2020 07:33 pm

Cinque Terre

68.27 K

Cinque Terre

1

ಸಂಬಂಧಿತ ಸುದ್ದಿ