ಧಾರವಾಡ: ಮಳೆಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆಯಲ್ಲಿ ಅವ್ಯವಹಾರ ಮಾಡಿರುವ ಹಿನ್ನೆಲೆಯಲ್ಲಿ ನಾಲ್ವರು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಅಮಾನತು ಮಾಡಿ ಧಾರವಾಡ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಬಹುತೇಕ ಮನೆಗಳು ಬಿದ್ದಿದ್ದವು. ಬಿದ್ದ ಮನೆಗಳಿಗೆ ಪರಿಹಾರ ನೀಡುವ ಬದಲು, ಬೀಳದೆ ಇರುವ ಮನೆಗಳಿಗೆ ಪರಿಹಾರ ನೀಡಿ ಈ ಅಧಿಕಾರಿಗಳು ಅವ್ಯವಹಾರ ನಡೆಸಿದ್ದರು. ಅತಿವೃಷ್ಟಿ ಪರಿಹಾರ ಫಲಾನುಭವಿ ಆಯ್ಕೆಯಲ್ಲಿ ಕೂಡ ಈ ಅಧಿಕಾರಿಗಳು ಅವ್ಯವಹಾರ ಮಾಡಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಉಪವಿಭಾಗಾಧಿಕಾರಿಗೆ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದರು.
ವರದಿಯಲ್ಲಿ ಈ ಅಧಿಕಾರಿಗಳು ಅವ್ಯವಹಾರ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ಎನ್.ಸಿ. ಪಟ್ಟೇದ, ಗ್ರಾಮ ಲೆಕ್ಕಾಧಿಕಾರಿ ರಾಕೇಶ್ ಪಾಟೀಲ್, ಪಿಡಬ್ಲ್ಯೂಡಿ ಇಲಾಖೆ ಸಹಾಯಕ ಅಭಿಯಂತರ ನಿಖಿಲೇಶ್ ಭಾರದೇಶ ಹಾಗೂ ಯಾದವಾಡ ಪಿಡಿಓ ಪೀರಪ್ಪ ವಾಲಿಕಾರಗೆ ಅಮಾನತ್ತು ಮಾಡಿ ಆದೇಶ ನೀಡಲಾಗಿದೆ.
Kshetra Samachara
19/12/2020 11:05 pm