ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆ ಮೇಲೆ ಹಲ್ಲೆ ಆರೋಪಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯ

ಹುಬ್ಬಳ್ಳಿ- ಅವಳಿ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ಅದ್ಯಾಕೋ ಅಪರಾಧ ಪ್ರಕರಣಗಳೇ ಕಡಿಮೆ ಆಗುತ್ತಿಲ್ಲ. ದಿನದಿಂದ ದಿನಕ್ಕೆ ಪುಡಿರೌಡಿಗಳು ಗುಂಪು ಕಟ್ಟಿಕೊಂಡು ಗಲಾಟೆ ದೊಂಬಿ ನಡೆಸುತ್ತಿರುವ ದೂರುಗಳು ದಾಖಲಾಗುತ್ತಲೇ ಇವೆ. ಅದರಲ್ಲೂ ಮಧ್ಯರಾತ್ರಿ ಯುವಕರ ತಂಡವೊಂದು ಮಹಿಳೆ ಮೇಲೆ ಹಲ್ಲೆ ಮಾಡಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲವೇ ಅನ್ನೋ ಪ್ರಶ್ನೆ ಮೂಡಿದೆ.

ಯುವಕರ ತಂಡದಿಂದ ಮಹಿಳೆ ಮೇಲೆ ನಡೆದ ಹಲ್ಲೆ, ಹಲ್ಲೆಗೊಳಗಾದ ಮಹಿಳೆಯ ಮುಖದ ತುಂಬೆಲ್ಲಾ ಹರಡಿರುವ ರಕ್ತ, ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿರೋ ಮಹಿಳೆಯರು- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಹೆಗ್ಗೆರಿ ಬಡಾವಣೆಯ ಮಾರುತಿ ಕಾಲೋನಿಯಲ್ಲಿ. ಹೌದು,, ಹೆಗ್ಗೆರಿಯ ಮಾರುತಿ ಕಾಲೋನಿಯಲ್ಲಿ ನೆಲೆಸಿರುವ ರಾಜೇಶ್ವರಿ ಎಂಬ ಮಹಿಳೆ ಮೇಲೆ, ನಿನ್ನೆ ತಡರಾತ್ರಿ ಹಲ್ಲೆ ನಡೆದಿದೆ. ಅದರಲ್ಲೂ ಅದೇ ಬಡಾವಣೆಯ ರಾಕೇಶ್ ಹೆಬ್ಬಳ್ಳಿ ಹಾಗೂ ಸಚಿನ್ ಹೆಬ್ಬಳ್ಳಿ ರಾಜೇಶ್ವರಿ ಮೇಲೆ ಮನೆ ಮುಂದೆ ಗಲಾಟೆ ಮಾಡಬೇಡಿ ಅನ್ನೋ ಕ್ಷುಲ್ಲಕ ಕಾರಣಕ್ಕೆ, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆ ರಾಜೇಶ್ವರಿ ಆರೋಪಿಸಿದ್ದಾರೆ.

ಅಲ್ಲದೇ ಮೊದಲೆಲ್ಲ ರಾಜೇಶ್ವರಿ ಬಳಿಯೂ ಖರ್ಚಿಗೆ ಹಣ ಕೇಳುತ್ತಿದ್ದರಂತೆ. ಹಣ ಕೊಡುವುದಿಲ್ಲ ಎಂದಿದ್ದಕ್ಕೆ ನಮ್ಮ ಮನೆ ಮುಂದೆ ನಿತ್ಯ ರಾಕೇಶ ಮತ್ತು ಸಚಿನ್ ಗುಂಪು ಕಟ್ಟಿಕೊಂಡು ಬಂದು‌ ರಾತ್ರಿ ಎಣ್ಣೆ ಪಾರ್ಟಿ ಮಾಡಿ, ಗಲಾಟೆ ಮಾಡುತ್ತಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೂ ಮಾಹಿತಿ ನೀಡಿದ್ರೂ, ಯಾವುದೇ ಪ್ರಯೋಜನ ಆಗುತ್ತಿಲ್ಲ. ‌ನಿನ್ನೆ ತಡರಾತ್ರಿಯೂ ಎಣ್ಣೆ ಹೊಡೆದಯ ಗಲಾಟೆ ಮಾಡುತ್ತಿದ್ದರು. ಈ ವೇಳೆ ರಾಜೇಶ್ವರಿ ನನ್ನ ಮಗಳಿಗೆ ಆರೋಗ್ಯ ಸರಿ ಇಲ್ಲ. ಮನೆ ಮುಂದೆ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ, ಚಾಕುವಿನಿಂದ ಇರಿಯಲು ಬಂದಿದ್ದಾರೆ. ಅದೃಷ್ಟವಶಾತ್ ಅದು ಕಣ್ಣಿನ ಮೇಲ್ಬಾಕ್ಕೆ ಇರಿದುಕೊಂಡು ಹೋಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ‌ ಇದೇ ವೇಳೆ ಮುಖಕ್ಕೆ ಹೊಡೆಯಲಾಗಿದ್ದು, ಮುಖದ ತುಂಬೆಲ್ಲ ರಕ್ತ ಬರುತ್ತಿತ್ತು. ಹೀಗಾಗಿ‌ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೋರಿಸಿಕೊಂಡು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರಾಜೇಶ್ವರಿ ದೂರು ದಾಖಲಿಸಿದ್ದಾರೆ. ಇನ್ನು ರಾಜೇಶ್ವರಿ ಮೇಲಿನ ಹಲ್ಲೆಯಿಂದ ಕಾಲೋನಿಯಲ್ಲಿರುವ ಮಹಿಳೆಯರು ಆತಂಕಕ್ಕೊಳಗಾಗಿದ್ದು, ಹಲ್ಲೆ ಮಾಡಿದ‌ ಯುವಕರ ಮೇಲೆ ಕ್ರಮಕೈಗೊಂಡು, ನಮಗೆ ರಕ್ಷಣೆ ಕೊಡಿ ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.

ಇನ್ನು ಹಲ್ಲೆ ಮಾಡಿದ ರಾಕೇಶ್ ಮತ್ತು ಸಚಿನ್, ರಾಜೇಶ್ವರಿಗೆ ಅಪರಿಚಿತರೇನಲ್ಲ. ಈ ಇಬ್ಬರು ತಾರಿಹಾಳದ ನಿವಾಸಿಗಳಾಗಿದ್ದು, ಒಂದೇ ಏರಿಯಾದಲ್ಲಿ ಗೆಳೆಯರ ಜೊತೆ ಮನೆ ಮಾಡಿಕೊಂಡಿದ್ದಾರೆ. ಗೆಳೆಯರ ಜೊತೆ ನಿತ್ಯ ಎಣ್ಣೆ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡುತ್ತ ಬಂದಿದ್ದಾರೆ. ಹೀಗಾಗಿ ‌ಇದೀಗ ಈ ಪಾರ್ಟಿ ಅತಿರೇಕಕ್ಕೆ ತೆರಳಿ ಮಹಿಳೆ ಮೇಲಿನ ಹಲ್ಲೆಗೆ ಬಂದು ನಿಂತಿದೆ. ಮೊದಲೇ ಕೊಲೆ, ಸುಲಿಗೆ, ಹಲ್ಲೆಯಂತಹ ಪ್ರಕರಣಗಳು ಅವಳಿ ನಗರದಲ್ಲಿ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಇದೆಲ್ಲದಕ್ಕೂ ಯಾವಾಗ ಕಡಿವಾಣ ಹಾಕುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

14/12/2020 06:51 pm

Cinque Terre

129.46 K

Cinque Terre

16

ಸಂಬಂಧಿತ ಸುದ್ದಿ