ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ :ಯೋಗೇಶಗೌಡ ಕೊಲೆ ಪ್ರಕರಣ: ಚಂದ್ರಶೇಖರ್ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬಿಐ

ಧಾರವಾಡ: ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ಆರೋಪದಡಿ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ್ ಇಂಡಿಯನ್ನು ಸಿಬಿಐ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಯೋಗೇಶಗೌಡ ಗೌಡರ ಹತ್ಯೆಗೆ ಭೀಮಾ ತೀರದಿಂದ ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ವಿಜಯಪುರದ ಅವರ ನಿವಾಸದಲ್ಲಿ ಚಂದ್ರಶೇಖರ್ ಇಂಡಿ ಅಲಿಯಾಸ್ ಚಂದು ಮಾಮಾನನ್ನು ಶನಿವಾರ ಸಿಬಿಐ ವಶಕ್ಕೆ ಪಡೆದಿದ್ದರು. ನಿನ್ನೆ ಚಂದ್ರಶೇಖರ್ ಇಂಡಿಯನ್ನು ಧಾರವಾಡ ಜಿಲ್ಲಾಸ್ಪ್ರತೆಯಲ್ಲಿ ಕೋವಿಡ್ ತಪಾಸಣೆಗೆ ಒಳಪಡಿಸಿರುವ ಸಿಬಿಐ, ಪುನಃ ಉಪನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ಸಿಬಿಐ ತಂಡ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯ ಯಾವ‌ ನಿರ್ಣಯ ಕೈಗೊಳ್ಳಲಿದೆ ಕಾದುನೋಡಬೇಕಿದೆ.

Edited By :
Kshetra Samachara

Kshetra Samachara

14/12/2020 12:22 pm

Cinque Terre

59.89 K

Cinque Terre

0

ಸಂಬಂಧಿತ ಸುದ್ದಿ