ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೆಸಿಬಿ ಬಡಿದು ಯುವಕ ಸಾವು

ಹುಬ್ಬಳ್ಳಿ: ಮೂತ್ರ ವಿಸರ್ಜನೆ ವೇಳೆ ಜೆಸಿಬಿ ಗುದ್ದಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಗರದ ದೇಸಾಯಿ ಸರ್ಕಲ್ ಪಕ್ಕದ ಉಸುಕಿಮ ಅಡ್ಡೆಯಲ್ಲಿ ನಡೆದಿದೆ.

ದೇವರಾಜ್ ಬಂಡಿವಡ್ಡರ (18) ಮೃತ ಯುವಕ. ದೇವರಾಜ್ ಬುಧವಾರ ರಾತ್ರಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಹಿಂದಿನಿಂದ ಜೆಸಿಬಿ ಗುದ್ದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಆತನನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ದೇವರಾಜ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಪೋಲಿಸ್ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

09/12/2020 11:01 pm

Cinque Terre

60.76 K

Cinque Terre

7

ಸಂಬಂಧಿತ ಸುದ್ದಿ