ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಕ್ರಮ ವರ್ಗಾವಣೆ ದಂಧೆಗಿಲ್ಲ ಬ್ರೇಕ್: ಅವ್ಯವಹಾರ ನಡೆದು ಒಂದುವರೆ ವರ್ಷ ಕಳೆದರೂ ತನಿಖೆ ಸ್ಥಗಿತ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಳೆದ ಎರಡು ವರ್ಷದಿಂದ ವರ್ಗಾವಣೆ ದಂಧೆ ಜೋರಾಗಿದೆ.ಒಂದುವರೆ ವರ್ಷದ ಹಿಂದೆ ನಡೆದಿದ್ದ ದೊಡ್ಡ ಮಟ್ಟದ ವರ್ಗಾವಣೆಯ ಅವ್ಯವಹಾರ ಇದೀಗ ಸದ್ದಿಲ್ಲದೆ ಮೂಲೆಗೆ ಸೇರಿದೆ. ವರ್ಗಾವಣೆಯಲ್ಲಿ ತೊಡಗಿದ್ದ 140 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಅಮಾವತ್ತು ಮಾಡಿದ್ದ ಇಲಾಖೆಯೇ ಇದೀಗ ಅವರನ್ನ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲೇ ಅಕ್ರಮವಾಗಿ ವರ್ಗಾವಣೆ ಆರೋಪ ಕೇಳಿ ಬಂದಿದ್ದು, 2018 ರಲ್ಲಿಯೇ ದೊಡ್ಡ ಮಟ್ಟದ ವರ್ಗಾವಣೆ ದಂಧೆಗೆ ಅಧಿಕಾರಿಗಳು ಸೇರಿ ಚಾಲಕರು ಮತ್ತು ನಿರ್ವಾಹಕರು ಭಾಗಿಯಾಗಿದ್ದರು.ಆಗ ಇವರೆಲ್ಲರನ್ನ ಅಮಾನತ್ತು ಮಾಡಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಕ್ರಮ ನಡೆದ ಬಗ್ಗೆ ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿಯನ್ನು ಸಹ ನೇಮಿಸಲಾಗಿತ್ತು. ಆದರೆ ನೇಮಿಸಿದ್ದ ನ್ಯಾಯಮೂರ್ತಿ ಗಳ ವರದಿ ಇನ್ನೂ ಸಹ ಮೇಲಾಧಿಕಾರಿಗಳ ಕೈ ಸೇರಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಅಲ್ಲದೆ ಈ ಹಿಂದೆ ಅಕ್ರಮವಾಗಿ ವರ್ಗಾವಣೆಯಾಗಿದ್ದ ಸಿಬ್ಬಂದಿಗಳು ಮೂರು ತಿಂಗಳು ಮಾತ್ರ ಅಮಾನತ್ತಾಗಿದ್ದು, ನಂತರ ಮತ್ತೆ ವರ್ಗಾವಣೆಯಾದ ಸ್ಥಳದಲ್ಲೇ ಕೆಲಸಕ್ಕೆ ಮರುಕಳಿಸಿದ್ದಾರೆ.

ಇನ್ನು ಈ ವರ್ಗಾವಣೆ ನಂತರ ಎಲ್ಲ ದಾಖಲೆಗಳನ್ನು ಆಧರಿಸಿಯೇ ಅಕ್ರಮ ವರ್ಗಾವಣೆಯಾದ 140ಕ್ಕೂ ಹೆಚ್ಚು ಸಿಬ್ಬಂದಿಯನ್ನು ಸಾರಿಗೆ ಸಂಸ್ಥೆ ಅಮಾನತ್ತು ಮಾಡಿತ್ತು.‌‌3 ತಿಂಗಳಲ್ಲಿ ವರದಿ ಆಧರಿಸಿ ಅವರ ವಿರುದ್ಧ ಕರ್ಮಕ್ಕೂ ಸಹ ಮುಂದಾಗುತ್ತೇವೆ ಅಧಿಕಾರಿಗಳು ಸಹ ಹೇಳಿದ್ದರು ಆದರೆ ಸದ್ಯದ ಪರಸ್ಥಿತಿಯನ್ನ ನೋಡಿದರೆ ಅಕ್ರಮ ಮಾಡಿ ವರ್ಗಾವಣೆಯಾದ ಚಾಲಕರು, ನಿರ್ವಾಹಕರು ಮತ್ತು ಅಧಿಕಾರಿಗಳ ಪರವಾಗಿ ಮೇಲಾಧಿಕಾರಿಗಳು ನಿಂತಿದ್ದಾರಾ ಅನ್ನುವ ಅನುಮಾನ ಶುರುವಾಗಿದೆ..ಪ್ರಕರಣ ನಡೆದು ಒಂದೂವರೆ ವರ್ಷಗಳೇ ಕಳೆದರೂ ಇಂದಿಗೂ ಸಹ ತನಿಖೆಯ ಹಂತದಲ್ಲೇ ಇರೋದು ಸದ್ಯ ಅಕ್ರಮ ಮಾಡಿದರು ಕೇಳುವವರು ಇಲ್ಲವಾ ಎನ್ನುವ ಪ್ರಶ್ನೆ ಹುಟ್ಟುತ್ತಿದೆ.

ಒಟ್ಟಾರೆ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ 140ಕ್ಕೂ ಹೆಚ್ಚು ಸಿಬ್ಬಂದಿಗೆ ಯಾವುದೇ ಕಠಿಣ ಕರ್ಮವನ್ನ ಜರುಗಿಸದೆ, ಅಕ್ರಮ ಸಾಬೀತಾದರು ಅವರನ್ನು ಕೇವಲ ಮೂರು ತಿಂಗಳಿಗೆ ಮಾತ್ರ ಅಮಾನತ್ತು ಮಾಡಿದ್ದು, ಇದೀಗ ಅವರೆಲ್ಲ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ..ಆದರೆ ತನಿಖೆಯ ನೆಪ ಹೇಳುತ್ತಿರುವ ಸಾರಿಗೆ ಸಂಸ್ಥೆ ತನಿಖೆಯ ಹಾದಿಯೇ ಹಳ್ಳಹಿಡಿದಿದೆ

Edited By :
Kshetra Samachara

Kshetra Samachara

05/12/2020 05:36 pm

Cinque Terre

68.41 K

Cinque Terre

2

ಸಂಬಂಧಿತ ಸುದ್ದಿ