ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋಟಿ..ಕೋಟಿ..ಹಣಗಳಿಸಿದ್ದ ಆದರೆ ಹಾದಿಯಲ್ಲಿಯೇ ಹೆಣವಾಗಿ ಹೋದ...!

ಹುಬ್ಬಳ್ಳಿ: ಪರರಿಗೆ ಉಪಕಾರ ಮಾಡಲು ಹೋದವ ಹಾಡ ಹಗಲೇ ಹೆಣವಾಗಿ ಹೋಗಿದ್ದ. ಮಾಜಿ ನಟೋರಿಯಸ್ ಸುಧಾರಿಸಿ ಜನವಿರೋಧಿ, ಅಕ್ರಮ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಸಮರ ಸಾರಿದ್ದ. ಅದೇ ಅವನ ಜೀವಕ್ಕೆ ಉರುಳಾಯ್ತೋ ಏನೋ ಗೊತ್ತಿಲ್ಲ. ಆದ್ರೆ, ಕೋಟಿ ಕೊಟಿ ಹಣ ಇದ್ದವ ಹಾದಿ ಹೆಣವಾಗಿದ್ದಾನೆ.

ಹೀಗೆ ರಕ್ತ ಸಿಕ್ತವಾಗಿ ಹೆಣವಾಗಿ ಬಿದ್ದವನೇ 52ವರ್ಷದ ರಮೇಶ ಭಾಂಡಗೆ. ಹುಬ್ಬಳ್ಳಿಯ ಕಮರಿಪೇಟೆ ನಿವಾಸಿಯಾದ ರಮೇಶ, ಹೇರ್ ಕಟಿಂಗ್ ಮಾಡಿಸಲಿಕ್ಕೆ ಬಾಬಾಸಾನ್ ಗಲ್ಲಿಯ ಕಟಿಂಗ್ ಶಾಪ್ ಗೆ ಬಂದಿದ್ದ‌. ಈತ ಬಂದಿದ್ದನ್ನ ನೋಡಿದ್ದ ದುಷ್ಕರ್ಮಿಗಳು ಆಗಲೇ ಹತ್ಯೆಗೆ ಸ್ಕೆಚ್ ಹಾಕಿದ್ದರು. ಇನ್ನೇನು ರಮೇಶ ಕಟಿಂಗ್ ಮುಗಿಸಿಕೊಂಡು ಹೊರ ಬರಬೇಕು ಅನ್ನುವಷ್ಟರಲ್ಲೇ ದುಷ್ಕರ್ಮಿಗಳು ಆತನ ಮೇಲೆ ಚಾಕುವಿನಿಂದ ಮೂರುಬಾರಿ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ‌‌. ಬಳಿಕ ರಕ್ತ ಸಿಕ್ತವಾಗಿ ಬಿದ್ದಿದ್ದ ರಮೇಶನನ್ನು ಸ್ಥಳೀಯರು, ಪೊಲೀಸರ ಸಹಾಯದಿಂದ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ರಮೇಶ, ಆಸ್ಪತ್ರೆ ಸೇರೋ ಮುನ್ನವೇ ಅಸುನೀಗಿದ್ದ..

ಇನ್ನೂ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ RTI ಕಾರ್ಯಕರ್ತನಾಗಿದ್ದ ರಮೇಶ, ಸರ್ಕಾರಿ ಜಾಗವನ್ನ ಅಕ್ರಮವಾಗಿ ಕಬ್ಜಾ ಮಾಡಿದವರ ವಿರುದ್ಧ, ಅಕ್ರಮ ಸಕ್ರಮ ಮಾಡಿದವರ ವಿರುದ್ಧ ಕಾನೂನು ಸಮರ ಸಾರಿದ್ದ. ಅದ್ರಲ್ಲಿ ನಗರದ ಗಣ್ಯ ವ್ತಕ್ತಿಗಳೂ ಶಾಮೀಲಿದ್ದಾರೆ ಅಂತ ಲೋಕಾಯುಕ್ತಕ್ಕೂ ಪತ್ರ ಬರೆದಿದ್ದ. ಹೀಗಾಗಿಯೇ ಅನೇಕ ಪ್ರಭಾವಿಗಳನ್ನ ಎದುರು ಹಾಕಿಕೊಂಡಿದ್ದ ರಮೇಶ. ಈ ಹಿಂದೆ ಸುಮಾರು ಬಾರಿ ಜೀವಬೆದರಿಕೆ ಕರೆಗಳೂ ರಮೇಶನಿಗೆ ಬಂದಿದ್ವಂತೆ. ಹೀಗಾಗಿಯೇ ಕಮರಿಪೇಟೆಯ ತನ್ನ ಮನೆಯ ಸುತ್ತ 8 ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಂಡಿದ್ದ‌‌. ಇನ್ನು ನಗರದ ಗಬ್ಬೂರು, ಬಿಡ್ನಾಳ, ಹಳೇ ಹುಬ್ಬಳ್ಳಿ ಭಾಗದಲ್ಲಿ ಒತ್ತುವರಿಯಾಗಿದ್ದ ಜಾಗೆಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ದಾಖಲಾತಿಗಳನ್ನ ಸಂಗ್ರಹಿಸುತ್ತಿದ್ದ ಎಂದು ತಿಳಿದುಬಂದಿದೆ‌. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಅಂತ ಮೇಲ್ನೋಟಕ್ಕೆ ಗೊತ್ತಾದರೂ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕಿದೆ.

ಕೊಲೆಯಾದ ರಮೇಶ ಭಾಂಡಗೆ, ಹಿಂದೆ ರೌಡಿಶೀಟರ್ ಆಗಿದ್ದ. ಅಕ್ರಮ ಲಿಕ್ಕರ್ ಬಿಜಿನೆಸ್ ಸೇರಿದಂತೆ ಇನ್ನಿತರ ದಂಧೆಗಳಲ್ಲಿ ತೊಡಗಿದ್ದ. ಆಗಲೆ ಆತನಮೇಲೆ ಹಲವಾರು ದೂರುಗಳಿದ್ದವು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ದಂಧೆ ಆರಂಭಿಸಿದ್ದ ರಮೇಶ, ಪುಡಿ ಆಟವನ್ನ ಬಿಟ್ಟಿದ್ದ ಎಲ್ಲ ಕೇಸುಗಳನ್ನು ನಿಖಾಲಿ ಮಾಡಿಕೊಂಡು ತಾನಾಯ್ತು, ತನ್ನ ಪಾಡಾಯ್ತು ಅಂತ ತನ್ನ ಕೆಲಸ ಮಾಡಿಕೊಂಡು ಸುಮ್ಮನಿದ್ದ. ತದನಂತರ ಮಾಹಿತಿ ಹಕ್ಕಿನ ಗೀಳು ಅಂಟಿಸಿಕೊಂಡು ಇದ್ದ ಬಿದ್ದವರ ಮೇಲೆ ಕೇಸ್ ಜಡಿಯಲು ಶುರು ಮಾಡಿದ್ದ ಅಂತ ಮಾತುಗಳು ಕೇಳಿಬರ್ತಿವೆ..

ಸಧ್ಯ ರಮೇಶನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಅಲ್ಲದೆ, ಕೊಲೆ ನಡೆದ ಸ್ಥಳದ ಸಿಸಿಟಿವಿ ದೃಷ್ಯಾವಳಿಗಳು ಪೊಲೀಸರ ಕೈ ಸೇರಿವೆ. ಮೇಲಾಗಿ ಕೊಲೆಯನ್ನ ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಪಡೆದ ಪೊಲೀಸರಿಗೆ ಪ್ರಕರಣ ಭೇದಿಸೋದಕ್ಕೆ ತಡವಾಗೋದಿಲ್ಲ. ಸಧ್ಯ ಪ್ರಕರಣ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ..

Edited By : Nagesh Gaonkar
Kshetra Samachara

Kshetra Samachara

26/11/2020 04:15 pm

Cinque Terre

79.73 K

Cinque Terre

3

ಸಂಬಂಧಿತ ಸುದ್ದಿ