ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಲ್ಲಿರುವ ವಿನಯ್ ಕುಲಕರ್ಣಿ ಒಬ್ಬ ಸಾಮಾನ್ಯ ಕೈದಿ

ಬೆಳಗಾವಿ- ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಾಮಾನ್ಯ ಕೈದಿಯ ಸೌಲಭ್ಯ ನೀಡಲಾಗಿದೆ.

ವಿನಯ್ ಕುಲಕರ್ಣಿ ಇರುವ ಸೆಲ್ ಒಳಗೆ ಟಿವಿ ಇಲ್ಲ‌‌. ಒಂದು ಲೋಟ, ತಟ್ಟೆ, ಹಾಸಿಗೆ-ದಿಂಬು ಬಿಟ್ಟು ಬೇರೆ ಯಾವ ಸೌಲಭ್ಯಗಳನ್ನೂ ನೀಡಲಾಗಿಲ್ಲ. ಜೈಲಿಗೆ ಅವರನ್ನು ಹಸ್ತಾಂತರಿಸಿದ ಮೊದಲ ದಿನ ರಾತ್ರಿ ಊಟ ಮಾಡಿರಲಿಲ್ಲ. ಸಿಬ್ಬಂದಿಯ ಜೊತೆ ಹೆಚ್ಚು ಮಾತಾಡಿರಲಿಲ್ಲ. ಮರುದಿನ ಬೆಳಿಗ್ಗೆ 7-30ಕ್ಕೆ ಸಿಬ್ಬಂದಿ ಕೊಟ್ಟ ಚಿತ್ರಾನ್ನ ಸೇವಿಸಿದ್ದಾರೆ. ಪತ್ರಿಕೆಗಳನ್ನು ಓದಿದ್ದಾರೆ. ಮದ್ಯಾಹ್ನದ ಊಟಕ್ಕೆ ಚಪಾತಿ, ಪಲ್ಯ, ಅನ್ನ, ಸಾಂಬಾರ್ ನೀಡಲಾಗಿತ್ತು. ಆದ್ರೆ ಅದನ್ನು ತಿರಸ್ಕರಿಸಿದ ವಿನಯ್ ಕುಲಕರ್ಣಿ ಹೊರಗಿನಿಂದ ಊಟ ತರಿಸಿದ್ದಾರೆ ಎನ್ನಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

11/11/2020 01:18 pm

Cinque Terre

70.93 K

Cinque Terre

0

ಸಂಬಂಧಿತ ಸುದ್ದಿ