ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಕೋ ಕಂಪನಿ ನಂಬಿದ್ದ ರೈತನ ಬದುಕು ಮೈ ಕೈ ಬಡಿದುಕೊಳ್ಳುವಂತಾಯಿತು: ಏನಿದು ನಿಮ್ಮ ಮೋಸ

ಹುಬ್ಬಳ್ಳಿ: ಅಕಾಲಿಕವಾಗಿ ಸುರಿದ ಮಳೆಗೆ ರೈತ ಕಂಗಾಲಾಗಿದ್ದಾನೆ. ಇನ್ನೇನು ಅಷ್ಟೋ ಇಷ್ಟೊ ಫಸಲು ಕೈಗೆ ಸಿಕ್ಕು ಬಿಡುತ್ತದೆ ಅಂತ ಕಾದು ಕುಳಿತಿದ್ದ ರೈತನಿಗೆ ಆ ಬೆಳೆ ಮಾತ್ರ ಅವನನ್ನು ಮತ್ತಷ್ಟು ಕುಗ್ಗಿಸಿದೆ. ಕಳೆದ ಬಾರಿಗಿಂತ ಈ ಬಾರಿಯ ಬೆಳೆ ಆ ಕಂಪನಿಯ ಬೀಜದಿಂದ ಹಾಳಾಗಿ ಹೋಗಿದೆ.

ಹೀಗೆ ನೆಲವನ್ನೇ ಬಿಟ್ಟೆಳದ ಹತ್ತಿ ಗಿಡಗಳು. ಒಂದೆಡೆ ಮಹಿಕೋ ಕಂಪನಿಯ ಪಾಕೆಟ್ ಗಳನ್ನ ಹಿಡಿದು ಆರೋಪ ಮಾಡುತ್ತಿರುವ ರೈತರು. ಹೌದು ಹುಬ್ಬಳ್ಳಿ ತಾಲೂಕು ಸೇರಿದಂತೆ ಧಾರವಾಡದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆಯೇ ಹತ್ತಿ. ಈ ಹತ್ತಿ ಬೆಳೆಯ ಮೇಲೆ ಅತಿ ಹೆಚ್ಚು ನಿರೀಕ್ಷೆ ಇಟ್ಟಿದ್ದ ರೈತನಿಗೆ ಇದೀಗ ಶಾಕ್ ಆಗಿದೆ. ಮಹಿಕೋ ಕಂಪನಿಯ 7383 ಸಂಖ್ಯೆಯ ಹತ್ತಿ ಬೀಜಗಳನ್ನು ಬಿತ್ತಿದ್ದ ರೈತ ಈ ಬಾರಿ ಇಳುವರಿಯನ್ನೇ ಕಾಣದೆ ಮುಂದೇನು ಅನ್ನೋ ಸ್ಥಿತಿ ತಲುಪಿದ್ದಾನೆ. ಕಳೆದ ಬಾರಿಗಿಂತ ಈ ಬಾರಿ ಮಳೆಯ ಹಾನಿ ಆಗಿದೆ. ಆದರೆ ಕಳೆದ ಬಾರಿಯಷ್ಟು ಮಳೆ ಹಾನಿ ಮಾಡಿಲ್ಲ. ಆದರೆ ಈ ಬೀಜಗಳನ್ನು ಬಿತ್ತಿದ್ದ ರೈತ ಕಡಿಮೆ ಇಳುವರಿ ಪಡೆದು ದಿಕ್ಕು ತೋಚದಂತಾಗಿದ್ದಾನೆ.

ಇನ್ನು ಹಲವಾರು ದಿನಗಳಿಂದ ಈ ಕಂಪನಿಯ ಬೀಜದ ಬಗ್ಗೆ ದೂರು ನೀಡುತ್ತಿದ್ದರು ಸಹ ಅದ್ಯಾಕೋ ರೈತರ ದೂರಿಗೆ ಅಧಿಕಾರಿಗಳು ಮಾತ್ರ ಸೊಪ್ಪು ಹಾಕುತ್ತಿಲ್ಲ..ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಾಲ್ ಬೆಳೆ ಪಡೆಯುತ್ತಿದ್ದ ರೈತ ಈ ಬೀಜಗಳನ್ನ ಬಿತ್ತಿದ ಮೇಲೆ ಕೇವಲ 2 ರಿಂದ 4 ಕ್ವಿನ್ಟಾಲ್ ಗೆ ಮಿಸಲಾಗಿದ್ದಾನೆ..ಹೀಗಾಗಿ ಈ ಕಂಪನಿಯಿಂದ ನಮಗೆ ಪರಿಹಾರ ಕೊಡಬೇಕು..ಅಲ್ಲದೆ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು ಅನ್ನೋದು ರೈತರ ಒತ್ತಾಯವಾಗಿದೆ..ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಸಹ ರೈತರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ

ಒಟ್ಟಾರೆ ಬೆಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ಈ ಮಹಿಕೋ ಕಂಪನಿ ಮತ್ತಷ್ಟು ಕುಗ್ಗುವಂತೆ ಮಾಡಿದ್ದು, ಇನ್ನಾದ್ರೂ ಅಧಿಕಾರಿಗಳು ಕಂಪನಿಯ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

03/01/2022 01:27 pm

Cinque Terre

36.77 K

Cinque Terre

2

ಸಂಬಂಧಿತ ಸುದ್ದಿ